»   » 'ಭರ್ಜರಿ' ಚಿತ್ರಕ್ಕೆ ಡಿಫ್ರೆಂಟ್ ಆಗಿ ವಿಶ್ ಮಾಡಿದ 'ಡಿ ಬಾಸ್' ಭಕ್ತರು

'ಭರ್ಜರಿ' ಚಿತ್ರಕ್ಕೆ ಡಿಫ್ರೆಂಟ್ ಆಗಿ ವಿಶ್ ಮಾಡಿದ 'ಡಿ ಬಾಸ್' ಭಕ್ತರು

Posted By:
Subscribe to Filmibeat Kannada
Darshan fans in social media differently wishes to 'Bharjari' movie | Filmibeat Kannada

ಇಂದು ಬಿಡುಗಡೆಯಾದ 'ಭರ್ಜರಿ' ಚಿತ್ರಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸ್ಯಾಂಡಲ್ ವುಡ್ ನಟ, ನಟಿಯರು, ಸೇರಿದಂತೆ ಸ್ಟಾರ್ ನಟರ ಅಭಿಮಾನಿ ಬಳಗದಿಂದಲೂ 'ಭರ್ಜರಿ' ತಂಡಕ್ಕೆ ಸಖತ್ ವಿಶ್ ಗಳು ಬಂದಿವೆ.

'ಭರ್ಜರಿ' ಹುಡುಗನಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಟರು

ಅದರಲ್ಲಿಯೂ ನಟ ದರ್ಶನ್ ಅಭಿಮಾನಿಗಳು 'ಭರ್ಜರಿ' ಚಿತ್ರಕ್ಕೆ ವಿಶೇಷವಾಗಿ ತಮ್ಮದೆ ರೀತಿಯಲ್ಲಿ ಶುಭ ಕೋರುತ್ತಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ದರ್ಶನ್ ಫ್ಯಾನ್ಸ್ ಧ್ರುವ ಸರ್ಜಾ ಅವರಿಗೆ ಡಿಫ್ರೆಂಟ್ ಆಗಿ ವಿಶ್ ಮಾಡುತ್ತಿದ್ದಾರೆ.

Darshan fans wishes to 'Bharjari' movie

ವಿಶೇಷ ಅಂದರೆ ನಟ ದರ್ಶನ್ 'ಭರ್ಜರಿ' ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಸಿನಿಮಾದ ಪ್ರಾರಂಭದ ದೃಶ್ಯದಲ್ಲಿ ದಾಸನ ಖದರ್ ಧ್ವನಿ ಚಿತ್ರದಲ್ಲಿದೆ. ಈ ಕಾರಣದಿಂದ 'ಭರ್ಜರಿ' ಸಿನಿಮಾ ದರ್ಶನ್ ಅಭಿಮಾನಿಗಳಿಗೆ ತುಂಬ ಸ್ಪೆಷಲ್ ಆಗಿದೆ.

ಫಸ್ಟ್ ಡೇ, ಫಸ್ಟ್ ಶೋ 'ಭರ್ಜರಿ' ನೋಡಿದವರು ಏನಂದ್ರು.?

ಅಂದ್ಹಾಗೆ, ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟಸಿರುವ ಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ, ಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಾವಣಗೆರೆ, ಬಿಜಾಪುರ, ಹೊಸಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನ ಮಧ್ಯರಾತ್ರಿಯಿಂದ ಶುರುವಾಗಿದೆ.

English summary
Actor Darshan fans wishes to Dhruva sarja staring 'Bharjari' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada