For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಚಿತ್ರದಲ್ಲಿ ಪಂಚ ಪಾಂಡವರು ಇವರೇ

  |
  Kurukshetra Movie: ಕುರುಕ್ಷೇತ್ರ' ಚಿತ್ರದಲ್ಲಿ ಪಂಚ ಪಾಂಡವರು ಇವರೇ

  ಕುರುಕ್ಷೇತ್ರ ಎಂದಾಕ್ಷಣ ಪಾಂಡವರು ಮತ್ತು ಕೌರವರು ಮೊದಲು ನೆನಪಾಗ್ತಾರೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ದಾಯಾದಿಗಳ ನಡುವೆ ಮಹಾಸಂಗ್ರಾಮ ಕಣ್ಣ ಮುಂದೆ ಬರುತ್ತೆ. ಧರ್ಮ ಸಂಸ್ಥಾಪನೆಗಾಗಿ ಶ್ರೀಕೃಷ್ಣ ನಡೆಸಿದ ಮಹಾಯಾಗ ಈ ಕುರುಕ್ಷೇತ್ರ.

  ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಪಂಚ ಪಾಂಡವರು. ಕೌರವರ ಪಾಳಯದಲ್ಲಿ ದುರ್ಯೋಧನ, ದುಶ್ಯಾಸನ, ಶಕುನಿ ಪ್ರಮುಖರು.

  ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ? ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?

  ದರ್ಶನ್ ದುರ್ಯೋಧನನಾಗಿ ನಟಿಸಿರುವ ಕುರುಕ್ಷೇತ್ರ ಚಿತ್ರದಲ್ಲಿ ರವಿಚೇತನ್ ದುಶ್ಯಾಸನನಾಗಿ ಕಾಣಿಸಿಕೊಂಡಿದ್ದಾರೆ. ಆರ್ಮುಗ ರವಿಶಂಕರ್ ಶಕುನಿಯಾಗಿ ಅಭಿನಯಿಸಿದ್ದಾರೆ. ಹಾಗಿದ್ರೆ, ಪಾಂಡವರ ಪಾತ್ರದಲ್ಲಿ ಬಣ್ಣ ಹಚ್ಚಿರುವ ಆ ನಟರು ಯಾರು? ಇಲ್ಲಿದೆ ವಿವರ...ಮುಂದೆ ಓದಿ....

  ಧರ್ಮರಾಯ ಶಶಿಕುಮಾರ್

  ಧರ್ಮರಾಯ ಶಶಿಕುಮಾರ್

  ಪಾಂಡವ ಪ್ರಥಮ ಧರ್ಮರಾಯ. ಧರ್ಮಕ್ಕೆ ಇನ್ನೊಂದು ಹೆಸರು ಧರ್ಮಜ. ಧರ್ಮರಾಯನಿಗೆ ಪಟ್ಟಾಭಿಷೇಕ ಕಟ್ಟಬೇಕು ಎಂಬುದು ಕೃಷ್ಣ ಸೇರಿದಂತೆ ಹಲವರ ಆಸೆಯಾಗಿರುತ್ತೆ. ದರ್ಶನ್ ಕುರುಕ್ಷೇತ್ರದಲ್ಲಿ ಧರ್ಮರಾಯನಾಗಿ ನಟಿಸಿರುವುದು ಸುಪ್ರೀಂ ಹೀರೋ ಶಶಿಕುಮಾರ್. ದರ್ಶನ್ ಜೊತೆ ಸಂಗೊಳ್ಳು ರಾಯಣ್ಣ ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್ ಇಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್

  ಬಲ ಭೀಮ ಡ್ಯಾನಿಶ್

  ಬಲ ಭೀಮ ಡ್ಯಾನಿಶ್

  ಬಲದಲ್ಲಿ ಭೀಮನನ್ನ ಮೀರಿಸುವವರಿಲ್ಲ ಎಂದೇ ಮಹಾಭಾರತದಲ್ಲಿ ಹೇಳಲಾಗುತ್ತೆ. ಅಜಾನುಭಾಹು, ದೊಡ್ಡ ದೇಹ, ಶಕ್ತಿವಂತ ಭೀಮ. ದುರ್ಯೋಧನನಿಗೆ ಸರಿಸಾಟಿ ಪಾತ್ರ ಭೀಮ. ದರ್ಶನ್ ಎದುರು ಭೀಮನ ಪಾತ್ರಕ್ಕೆ ಯಾರು ಎಂದು ಊಹಿಸುತ್ತಿರುವಾಗಲೇ ಡ್ಯಾನಿಶ್ ಅಖ್ತರ್ ಸೈಫ್ ಅವರನ್ನ ಬಾಲಿವುಡ್ ನಿಂದ ಕರೆತರಲಾಯಿತು. ಟ್ರೈಲರ್, ಪೋಸ್ಟರ್ ನಲ್ಲಿ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಪೌರಾಣಿಕ ಧಾರಾವಾಹಿಯಲ್ಲಿ ಹನುಮಾನ್ ಪಾತ್ರ ಮಾಡಿದ್ದರು ಡ್ಯಾನಿಶ್.

  ಅರ್ಜುನ ಸೋನು ಸೂದ್

  ಅರ್ಜುನ ಸೋನು ಸೂದ್

  ಮಧ್ಯಪಾಂಡವ, ಪರಾಕ್ರಮಿ, ಶ್ರೀಕೃಷ್ಣನ ಪರಮ ಮಿತ್ರ ಅರ್ಜುನ ಕುರುಕ್ಷೇತ್ರದಲ್ಲಿ ಬರುವ ಮುಖ್ಯ ಪಾತ್ರ. ಕರ್ಣನ ಎದುರಾಳಿ ಅರ್ಜುನನಾಗಿ ಬಾಲಿವುಡ್ ನಟ ಸೋನು ಸೂದ್ ನಟಿಸಿದ್ದಾರೆ. ಅರ್ಜುನ ಪಾತ್ರಕ್ಕೆ ತಕ್ಕಂತೆ ಸೋನು ಸೂದ್ ವೇಷಭೂಷಣ ಇದೆ. ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನ ರಂಜಿಸುತ್ತಾರೆ ಎಂಬುದು ಕಾದುನೋಡಬೇಕಿದೆ.

  'ಕುರುಕ್ಷೇತ್ರ' ಗೆದ್ದರೆ ಇಂಡಸ್ಟ್ರಿಯಲ್ಲಾಗುವ 5 ಬದಲಾವಣೆಗಳಿವು.! 'ಕುರುಕ್ಷೇತ್ರ' ಗೆದ್ದರೆ ಇಂಡಸ್ಟ್ರಿಯಲ್ಲಾಗುವ 5 ಬದಲಾವಣೆಗಳಿವು.!

  ನಕುಲ-ಸಹದೇವ

  ನಕುಲ-ಸಹದೇವ

  ಪಾಂಡವರಲ್ಲಿ ಕೊನೆಯ ಇಬ್ಬರು ನಕುಲ ಮತ್ತು ಸಹದೇವ. ಕನ್ನಡ ಚಿತ್ರರಂಗದ ಇಬ್ಬರು ಯುವನಟರು ಈ ಪಾತ್ರಗಳಲ್ಲಿ ನಟಿಸಿದ್ದಾರೆ. ನಕುಲನ ಪಾತ್ರದಲ್ಲಿ ಯಶಸ್ ಸೂರ್ಯ ಸಹದೇವನ ಪಾತ್ರದಲ್ಲಿ ಚಂದನ್ ಕಾಣಿಸಿಕೊಂಡಿದ್ದಾರೆ.

  English summary
  Shashi kumar as dharmaraya, danish as bheema, sonu sood as arjuna, yashas surya as nakula and chandan played sahadeva Characters in Kurukshetra movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X