twitter
    For Quick Alerts
    ALLOW NOTIFICATIONS  
    For Daily Alerts

    ಹುಟ್ಟುಹಬ್ಬದ ಸವಿನೆನಪಿನಲ್ಲಿ ಅಣ್ಣಾವ್ರ ಕುರಿತು ಇಂಟ್ರೆಸ್ಟಿಂಗ್ ವಿಷಯಗಳು

    |

    ಕರ್ನಾಟಕದಲ್ಲಿ ಅಭಿಮಾನಿಗಳು ಏನನ್ನು ಬೇಕಾದರೂ ಮರೆಯಬಹುದು. ಆದರೆ, ಅಣ್ಣಾವ್ರ ಹುಟ್ಟುಹಬ್ಬವನ್ನು ಮಾತ್ರ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಏಪ್ರಿಲ್ 24 ಬಂತು ಅಂದ್ರೆ, ಅಭಿಮಾನಿ ದೇವರುಗಳು ಪ್ರತಿ ಗಲ್ಲಿ ಗಲ್ಲಿಯಲ್ಲೂ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

    ಇಂದು (ಏಪ್ರಿಲ್ 24) ಡಾ.ರಾಜ್‌ಕುಮಾರ್ ಅವರ 94ನೇ ಹುಟ್ಟುಹಬ್ಬವನ್ನು ಕರುನಾಡು ಆಚರಣೆ ಮಾಡುತ್ತಿದೆ. ಡಾ.ರಾಜ್‌ಕುಮಾರ್ ಅಗಲಿ 16 ವರ್ಷಗಳಾಗಿದ್ದರೂ, ಅಭಿಮಾನಿಗಳು ತಮ್ಮ ಮನಸ್ಸಿನಲ್ಲಿ ಅಣ್ಣಾವ್ರನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಇಂತಹದ್ದೊಂದು ಅನ್‌ಕಂಡಿಷನಲ್ ಅಭಿಮಾನಿ ಬಳಗ ಹುಟ್ಟಲು ಕಾರಣ ಅಣ್ಣಾವ್ರ ಸಿನಿಮಾದ ಪಾತ್ರಗಳು. ಡಾ.ರಾಜ್‌ಕುಮಾರ್ ನಟಿಸಿದ ಒಂದೊಂದು ಪಾತ್ರ ಇಂದಿಗೂ ಅವರ ಅಭಿಮಾನಿಗಳಲ್ಲಿ ಅಚ್ಚಳಿಯದೆ ಉಳಿದಿದೆ. ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದ ಅಣ್ಣಾವ್ರ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

    ಅಣ್ಣಾವ್ರಿಗೆ ಇರೋ ಬಿರುದು ಮತ್ಯಾರಿಗೂ ಇಲ್ಲ

    ಅಣ್ಣಾವ್ರಿಗೆ ಇರೋ ಬಿರುದು ಮತ್ಯಾರಿಗೂ ಇಲ್ಲ

    ಡಾ.ರಾಜ್‌ಕುಮಾರ್ ಕೇವಲ ಒಬ್ಬ ನಟನಷ್ಟೇ ಅಲ್ಲ. ಕನ್ನಡಿಗರ ಸಂಸ್ಕೃತಿಯ ಕೊಂಡಿಯಾಗಿದ್ದರು. ಅಣ್ಣಾವ್ರ ಸಿನಿಮಾ ಜರ್ನಿಯನ್ನು ಅವಲೋಕಿಸಿದವರು ಇವರನ್ನು ಕಲ್ಚರಲ್ ಐಕಾನ್ ಎಂದೇ ಕರೆಯುತ್ತಾರೆ. ಇನ್ನೊಂದು ಅಭಿಮಾನಿಗಳು ಅಭಿಮಾನಿದಿಂದ ಕೊಟ್ಟ ಬಿರುದುಗಳು ಪಟ್ಟಿನೇ ದೊಡ್ಡದಿದೆ. ನಟಸಾರ್ವಭೌಮ, ವರನಟ, ಬಂಗಾರದ ಮನುಷ್ಯ, ಗಾನಗಂಧರ್ವ, ರಸಿಕರ ರಾಜ, ಕನ್ನಡ ಕಂಠೀರವ, ರಾಜಣ್ಣ, ಅಣ್ಣಾವ್ರು. ಹೀಗೆ ಬಿರುದುಗಳ ಪಟ್ಟಿ ಮುಂದುವರೆಯುತ್ತೆ. ಒಬ್ಬ ನಟ ಅಭಿಮಾನಿಗಳಿಂದ ಇಷ್ಟೊಂದು ಬಿರುದುಗಳನ್ನು ಪಡೆದವರು ಮತ್ಯಾರೂ ಇಲ್ಲ.

    35ಕ್ಕೂ ಹೆಚ್ಚು ಸಿನಿಮಾ ರಿಮೇಕ್

    35ಕ್ಕೂ ಹೆಚ್ಚು ಸಿನಿಮಾ ರಿಮೇಕ್

    ಡಾ.ರಾಜ್‌ಕುಮಾರ್ ಸಿನಿಮಾಗಳು ಸಮಾಜಮುಖಿಯಾಗಿರುತ್ತಿದ್ದವು. ಆಕ್ಷನ್, ಸೆಂಟಿಮೆಂಟ್, ಲವ್ ಸ್ಟೋರಿ ಎಲ್ಲಾ ಇದ್ದರೂ, ಅದು ಸಮಾಜಕ್ಕೆ ಮುಜುಗರ ತರುವಂತಿರಲಿಲ್ಲ. ಹೀಗಾಗಿ ರಾಜ್‌ಕುಮಾರ್ ಸಿನಿಮಾಗಳು ಅಂದರೆ, ಇಡೀ ಕುಟುಂಬವೇ ಥಿಯೇಟರ್‌ಗೆ ನುಗ್ಗುತ್ತಿತ್ತು. ಹಾಗಂತ ಜನರಷ್ಟೇ ಅಲ್ಲ. ಡಾ. ರಾಜ್‌ ನಟಿಸಿದ ಸುಮಾರು 35 ಸಿನಿಮಾಗಳನ್ನು 58 ಬಾರಿ 9ಕ್ಕೂ ಅಧಿಕ ಭಾಷೆಯಲ್ಲಿ ರಿಮೇಕ್ ಮಾಡಲಾಗಿದೆ. ಬೇರೆ ಯಾವುದೇ ನಟನ ಇಷ್ಟೊಂದು ಸಿನಿಮಾ ರಿಲೀಸ್ ಆದ ಉದಾಹರಣೆಗಳು ಇಲ್ಲ.

    ಅಣ್ಣಾವ್ರ ಒಂದು ಸಿನಿಮಾ 7 ಭಾಷೆಯಲ್ಲಿ ರಿಲೀಸ್

    ಅಣ್ಣಾವ್ರ ಒಂದು ಸಿನಿಮಾ 7 ಭಾಷೆಯಲ್ಲಿ ರಿಲೀಸ್

    ಅಣ್ಣಾವ್ರ ಸಿನಿಮಾಗಳು ಬಾಕ್ಸಾಫೀಸ್‌ನಷ್ಟೇ ಗೆದ್ದಿಲ್ಲ. ಪರಭಾಷೆಯ ಚಿತ್ರರಂಗದ ಮೇಲೂ ಪ್ರಭಾವ ಬೀರಿದೆ. 1986ರಲ್ಲಿ ಡಾ.ರಾಜ್‌ಕುಮಾರ್ ನಟಿಸಿದ 'ಅನುರಾಗ ಅರಳಿತು' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಇದೇ ಸಿನಿಮಾ ಸುಮಾರು ಏಳು ಭಾಷೆಗಳಲ್ಲಿ ರಿಮೇಕ್ ಆಗಿತ್ತು.

    ತೆಲುಗು ಸಿನಿಮಾದಲ್ಲಿ ನಟನೆ

    ತೆಲುಗು ಸಿನಿಮಾದಲ್ಲಿ ನಟನೆ

    ಡಾ.ರಾಜ್‌ಕುಮಾರ್ ಅಭಿಮಾನಿಗಳ ಆರಾಧ್ಯ ಧೈವ ಆಗಲು ಮತ್ತೊಂದು ಕಾರಣವಿದೆ. ಡಾ.ರಾಜ್‌ಕುಮಾರ್ ಸ್ಟಾರ್ ಆದ ಮೇಲೆ ಕನ್ನಡ ಚಿತ್ರರಂಗವನ್ನು ಬೇರೆ ಭಾಷೆಯಲ್ಲಿ ನಟಿಸುವ ಮನಸ್ಸು ಕೂಡ ಮಾಡಿಲ್ಲ. ಆದರೂ, ಆರಂಭದ ದಿನಗಳಲ್ಲಿ 'ಕಾಳಹಸ್ತಿ ಮಹತ್ಯಂ' ಎನ್ನುವ ಒಂದೇ ಒಂದು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಇದೂ ಕೂಡ ಅಣ್ಣಾವ್ರ ಮೊದಲ ಸಿನಿಮಾ ಬೇಡಕ ಕಣ್ಣಪ್ಪ ಚಿತ್ರದ ರಿಮೇಕ್.

    ಪ್ರಶಸ್ತಿಗಳನ್ನೂ ಮೊದಲಿಗರು

    ಪ್ರಶಸ್ತಿಗಳನ್ನೂ ಮೊದಲಿಗರು

    ಡಾ.ರಾಜ್‌ಕುಮಾರ್ ಅವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ರಾಜ್‌ಕುಮಾರ್ ಸಿನಿಮಾ ಸಾಧನೆಗಾಗಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕನ್ನಡದ ನಟನೊಬ್ಬ ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಎನಿಸಿಕೊಂಡಿದ್ದರು. ಹಾಗೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆ ಕೂಡ ರಾಜ್‌ಕುಮಾರ್ ಹೆಸರಿನಲ್ಲೇ ಇದೆ.

    English summary
    Dr Rajkumar 94th Birthday Interseting Facts about Natasarvabouma, Know More
    Sunday, April 24, 2022, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X