twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಯ್ ಡೈವೋರ್ಸ್ ಡ್ರಾಮಾ ಕಾಲಚಕ್ರ

    By Harshitha
    |

    ಗಾಂಧಿನಗರದ ಪಾಲಿಗೆ 'ಕರಿಚಿರತೆ' ಆಗಿದ್ದ ದುನಿಯಾ ವಿಜಿ, ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದು ದಾಂಪತ್ಯದ ಕಲಹದಲ್ಲಿ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಸಂಸಾರದ ಗುಟ್ಟು ಬೀದಿ ರಟ್ಟಾಗಿ ಕಳೆದ ವರ್ಷದಿಂದ ಸುದ್ದಿ ಮಾಧ್ಯಮಗಳಿಗೆ ವಿಜಿ ದಂಪತಿ ಆಹಾರವಾಗಿದ್ದರು.

    ಆದದ್ದನ್ನೆಲ್ಲವನ್ನು ಮರೆತು ಇದೀಗ ಮತ್ತೆ ಒಂದಾಗಿರುವ ವಿಜಿ-ನಾಗರತ್ನ, ಕೋರ್ಟ್ ಆದೇಶಕ್ಕೆ ತಲೆಬಾಗಿದ್ದಾದರೂ ಹೇಗೆ? ನ್ಯಾಯಾಲಯದಲ್ಲಿ ವಿಜಿ ವಿಚ್ಛೇದನ ಪ್ರಕರಣದ ಪ್ರಮುಖ ಘಟನಾವಳಿಗಳ ಕುರಿತ ಟೈಮ್ ಲೈನ್ ಇಲ್ಲಿದೆ.

    ನಾಗರತ್ನ ವಿರುದ್ಧ ವಿವಾಹ ವಿಚ್ಛೇದನ ಪ್ರಕರಣವನ್ನು ವಿಜಿ ದಾಖಲಿಸಿದ್ದರೆ, ವಿವಾಹ ಪುನರ್ ಸ್ಥಾಪನೆಗಾಗಿ ನಾಗರತ್ನ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಯ ಕಾನೂನು ಸಮರದ ಸಂಪೂರ್ಣ ವಿವರ ಹೀಗಿದೆ.

    Vijay1

    * ಜನವರಿ 17 - ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಗೆ ದುನಿಯಾ ವಿಜಿ ಹಾಜರು
    ತಮ್ಮ ಹದಿನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಕೊಳ್ಳಿ ಇಟ್ಟು, ವಿವಾಹ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ದುನಿಯಾ ವಿಜಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದರು.

    ''ನನ್ನ ಪತ್ನಿಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ'' ಎಂಬ ಆರೋಪಗಳಿಂದ ದುನಿಯಾ ವಿಜಿ ಕೋರ್ಟ್ ಮೆಟ್ಟಿಲೇರಿದ್ದರು. [ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದುನಿಯಾ ವಿಜಯ್]

    Vijay2

    * ಜನವರಿ 18 - ಮಾಧ್ಯಮಗಳಲ್ಲಿ ನಾಗರತ್ನ ಪ್ರತಿಕ್ರಿಯೆ
    ಅತ್ತ ದುನಿಯಾ ವಿಜಿ ಕೋರ್ಟ್ ಗೆ ಹಾಜರಾಗುತ್ತಿದ್ದಂತೆ ಇತ್ತ ಪತ್ನಿ ನಾಗರತ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ''ನನ್ನ ವಿರುದ್ಧ ವಿಜಿ ಮಾಡಿರುವ ಆರೋಪಗಳೆಲ್ಲಾ ಸುಳ್ಳು, ಅವರಿಗೆ ಬೇರೆ ಸಂಬಂಧವಿದೆ. ಇನ್ನೊಂದು ಮದುವೆಯಾಗಿದ್ದಾರೆ. ಈಗ ನನ್ನನ್ನ ಬೀದಿಗೆ ತರುತ್ತಿದ್ದಾರೆ'' ಅಂತ ನಾಗರತ್ನ ಹೇಳಿಕೆ ನೀಡಿದರು.

    ''ವಿಚ್ಛೇದನದ ನೋಟಿಸ್ ಸಿಕ್ಕಿರುವುದು ಶಾಕ್ ನೀಡಿದೆ.
    ನಾನು ಯಾವುದೇ ಕಾರಣಕ್ಕೂ ಅವರಿಂದ ದೂರಾಗಲ್ಲ'', ಅಂತ ನಾಗರತ್ನ ಹೇಳಿದ್ದರು. [ಮೌನ ಮುರಿದ ದುನಿಯಾ ವಿಜಯ್ ಪತ್ನಿ ನಾಗರತ್ನ]

    Vijay3

    * ಜನವರಿ 18 - ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ ಕಾರಣಗಳು
    ಮಾಧ್ಯಮಗಳಲ್ಲಿ ನಾಗರತ್ನ ಆರೋಪಗಳನ್ನ ಮಾಡುತ್ತಿದ್ದಂತೆ, ಇತ್ತ ದುನಿಯಾ ವಿಜಿ ಕೂಡ ಪತ್ನಿ ವಿರುದ್ಧ ಅನೇಕ ಆರೋಪಗಳನ್ನ ಮಾಡತೊಡಗಿದರು. ''ನನ್ನ ಪತ್ನಿ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಹೆತ್ತ ತಾಯಿಯನ್ನೇ ಬೀದಿ ಭಿಕಾರಿ ತರಹ ನೋಡಿದ್ದಾರೆ'', ಅಂತ ವಿಜಿ ತಿರುಗುಬಾಣ ಬಿಟ್ಟರು. [ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು]

    * ಜನವರಿ 18 - ಜೀವ ಬೆದರಿಕೆ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ಕೊಟ್ಟ ನಾಗರತ್ನ
    ನಟ ದುನಿಯಾ ವಿಜಿ ಅವರ ಪತ್ನಿ ನಾಗರತ್ನ, ತಮಗೆ ಜೀವ ಬೆದರಿಕೆ ಇದೆ ಅಂತ ಜನವರಿ 18ರ ರಾತ್ರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವಿಜಯ್ ಅವರ ಭಾವ ನಾಗರಾಜ್ ಅವರು ತಮಗೆ ಬೆದರಿಕೆ ಹಾಕಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದರೆ ಮುಖಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಅಂತ ನಾಗರತ್ನ ಆರೋಪಿಸಿದರು. [ಪೊಲೀಸರಿಗೆ ಮೊರೆ ಹೊದೆ ದುನಿಯಾ ವಿಜಿ ಪತ್ನಿ]

    Vijay4

    * ಜನವರಿ 20 - ದಂಪತಿ ವಿರಸಕ್ಕೆ ಅಂಬರೀಷ್ ಸಂಧಾನ
    ಪೊಲೀಸರಿಗೆ ದೂರು ಕೊಟ್ಟ ನಂತರ ತಮ್ಮ ಸಂಸಾರ ಬಂಡಿ ಸರಾಗವಾಗಿ ಸಾಗಲಿ ಅಂತ ನಾಗರತ್ನ ರೆಬೆಲ್ ಸ್ಟಾರ್ ಅಂಬರೀಷ್ ಮೊರೆ ಹೋದರು. ತಮ್ಮ ಮೂರು ಮಕ್ಕಳೊಂದಿಗೆ ಅಂಬಿ ಮನೆಗೆ ತೆರಳಿದ ನಾಗರತ್ನ ವಿಜಿಗೆ ಬುದ್ಧಿಮಾತು ಹೇಳುವಂತೆ ವಿನಂತಿಸಿಕೊಂಡಿದ್ದರು. [ವಿಜಯ್ -ನಾಗರತ್ನ ವಿರಸಕ್ಕೆ ಅಂಬರೀಷ್ ಸಂಧಾನ]

    * ಜನವರಿ 20 - ದುನಿಯಾ ವಿಜಿ 38ನೇ ಹುಟ್ಟುಹಬ್ಬ
    ಅಂಬರೀಷ್ ಮನೆಯಲ್ಲಿ ನಾಗರತ್ನ ಮತ್ತು ಮಕ್ಕಳು ಕಣ್ಣೀರು ಹಾಕುತ್ತಿದ್ದರೆ, ಇತ್ತ ದುನಿಯಾ ವಿಜಿ ತಮ್ಮ 38ನೇ ಹುಟ್ಟುಹಬ್ಬವನ್ನ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. [ತಾಯಿ ಜೊತೆ ಕೇಕ್ ಸವಿದ ದುನಿಯಾ ವಿಜಯ್]

    * ಜನವರಿ 22 - ದುನಿಯಾ ವಿಜಿ ಮೇಲೆ ಮಾವ ರುದ್ರಪ್ಪ ಕಿಡ್ನ್ಯಾಪ್ ಕೇಸ್ ದಾಖಲು
    ತಮ್ಮ ಮಗ ಆನಂದ್ ಅವರನ್ನು ದುನಿಯಾ ವಿಜಿ ಅಪಹರಿಸಿದ್ದಾರೆ ಎಂದು ಆರೋಪಿಸಿ ನಾಗರತ್ನ ತಂದೆ ರುದ್ರಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. [ನಟ ದುನಿಯಾ ವಿಜಯ್ ವಿರುದ್ಧ ಕಿಡ್ನಾಪ್ ಕೇಸ್]

    Vijay5

    * ಜನವರಿ 31 - ದುನಿಯಾ ವಿಜಿ ಪ್ರೆಸ್ ಮೀಟ್
    ಆರೋಪ ಪ್ರತ್ಯಾರೋಪಗಳ ನಡುವೆ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ದುನಿಯಾ ವಿಜಿ ಪತ್ರಿಕಾಗೋಷ್ಠಿ ಏರ್ಪಡಿಸಿದರು. ತಂದೆ ರುದ್ರಯ್ಯ, ತಾಯಿ ನಾರಾಯಣಮ್ಮ, ತಂಗಿ ಉಷಾರೊಂದಿಗೆ ಸುದ್ಧಿಗೋಷ್ಠಿ ನಡೆಸಿದ ವಿಜಿ, ನಾಗರತ್ನಗೆ ಅವರು ಕೊಡಿಸಿದ್ದ ಒಡವೆ, ವಸ್ತ್ರಗಳ ಸಂಪೂರ್ಣ ವಿವರವನ್ನ ಬಿಚ್ಚಿಟ್ಟರು.[ನಟ ದುನಿಯಾ ವಿಜಯ್ ಸುದ್ದಿಗೋಷ್ಠಿ ಹೈಲೈಟ್ಸ್]

    * ಮಾರ್ಚ್ 14 - ಮಧ್ಯಸ್ತಿಕೆ ಕೇಂದ್ರದಲ್ಲಿ ಸಂಧಾನ ವಿಫಲ
    ಸುದ್ದಿಗೋಷ್ಠಿಯ ಬಳಿಕ ಮಾಧ್ಯಮಗಳ ಮುಂದೆ ಹಾಜರಾಗದ ವಿಜಿ ಮತ್ತು ನಾಗರತ್ನ ಅರ್ಜಿ ವಿಚಾರಣೆಗಾಗಿ ಕೋರ್ಟ್ ಗೆ ಆಗಮಿಸಿದರು. ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯ, ಮಧ್ಯಸ್ತಿಕೆ ಕೇಂದ್ರಕ್ಕೆ ವರ್ಗಾಯಿಸಿತು. ಸಂಧಾನಕ್ಕೆ ನಾಗರತ್ನ ರೆಡಿಯಿದ್ದರೂ, ದುನಿಯಾ ವಿಜಿ ಮಾತ್ರ ತಮ್ಮ ಪಟ್ಟನ್ನು ಬಿಡಲಿಲ್ಲ. [ಮಧ್ಯಸ್ಥಿಕೆ ಕೇಂದ್ರದಲ್ಲಿ ದುನಿಯಾ ವಿಜಿ ಗಲಾಟೆ ಸಂಸಾರ]

    Vijay6

    * ಮೇ 28 - ಸಂಧಾನ ವಿಫಲ
    ಮಧ್ಯಸ್ತಿಕೆ ಕೇಂದ್ರದಲ್ಲಿ ಸಂಧಾನ ವಿಫಲವಾದ ನಂತ್ರ ನ್ಯಾಯಾಧೀಶರು ದುನಿಯಾ ವಿಜಿ ಮತ್ತು ನಾಗರತ್ನಗೆ ಪ್ರತ್ಯೇಕವಾಗಿ ಕೌನ್ಸಿಲಿಂಗ್ ನಡೆಸಿದರು. ಆದರೆ ಇಬ್ಬರ ಮನವೊಲಿಸಲು ಸಾಧ್ಯವಾಗಲಿಲ್ಲ. [ದುನಿಯಾ ವಿಜಯ್, ನಾಗರತ್ನ ಸಂಧಾನ ವಿಫಲ]

    * ಸೆಪ್ಟೆಂಬರ್ 25 - ಜೀವನಾಂಶ ಕೋರಿ ದುನಿಯಾ ವಿಜಿ ಅರ್ಜಿ
    ''ನಾನು ಕಟ್ಟಿರುವ ಮನೆ ಪತ್ನಿ ನಾಗರತ್ನ ಹೆಸರಲ್ಲಿದೆ. ಅಲ್ಲದೆ ಜಯಮ್ಮನ ಮಗ ಚಿತ್ರವೂ ಪತ್ನಿ ಹೆಸರಲ್ಲಿ ನಿರ್ಮಾಣವಾಗಿದೆ. ಅದರ ಲಾಭವೂ ಪತ್ನಿ ಅಕೌಂಟ್ ಗೆ ಹೋಗುತ್ತಿರುವುದರಿಂದ ನನಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ'', ಅಂತ ವಿಜಿ ತಮ್ಮ ಅಳಲನ್ನು ತೋಡಿಕೊಂಡು ಪತ್ನಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರು. [ದುನಿಯಾ ವಿಜಯ್ ಗೆ ಜೀವನಾಂಶ ಬೇಕಂತೆ]

    Vijay7

    * ನವೆಂಬರ್ 16 - ವಿಜಿ-ನಾಗರತ್ನ ದಾಂಪತ್ಯ ತಾರ್ಕಿಕ ಅಂತ್ಯ
    ವಿಜಿ ಅರ್ಜಿಯನ್ನು ತಿರಸ್ಕರಿದ ಕೋರ್ಟ್, ಜೀವನಾಂಶಕ್ಕಾಗಿ ನಾಗರತ್ನ ಹಾಕಿದ್ದ ಅರ್ಜಿಯನ್ನ ಎತ್ತಿ ಹಿಡಿಯಿತು. ತಿಂಗಳಿಗೆ 60,000 ರೂಪಾಯಿ ಜೀವನಾಂಶ ನೀಡಬೇಕು ಅಂತ ನಾಗರತ್ನ ಹಾಕಿದ್ದ ಅರ್ಜಿಯನ್ನು ಪುರಸ್ಕರಿಸಿ ಷರತ್ತುಗಳೊಂದಿಗೆ 30,000 ರೂಪಾಯಿಯನ್ನು ವಿಜಿ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತು. [ದುನಿಯಾ ವಿಜಿ-ನಾಗರತ್ನ ದಾಂಪತ್ಯಕ್ಕೆ ತಾರ್ಕಿಕ ಅಂತ್ಯ]

    * ನವೆಂಬರ್ 19 - ವೈಮನಸು ಅಂತ್ಯ
    ಸತತ ಒಂದುವರೆ ವರ್ಷಗಳ ಕಾನೂನು ಸಮರದ ನಂತ್ರ ದುನಿಯಾ ವಿಜಿ ಮತ್ತು ನಾಗರತ್ನ ಒಂದಾಗಿ ಬಾಳುವುದಕ್ಕೆ ನಿರ್ಧರಿಸಿದರು. ಮಧ್ಯಸ್ತಿಕೆ ಕೇಂದ್ರದಲ್ಲಿ ಸಾಂಧಾನ ಯಶಸ್ವಿಯಾಗಿ ತಾವು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ವಿಜಿ ದಂಪತಿ ನಿರ್ಧರಿಸಿದರು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

    Vijay8

    * ನವೆಂಬರ್ 19 - ಮಾಧ್ಯಮಗಳ ಮುಂದೆ ಸಿಹಿ ಹಂಚಿಕೆ
    ಕಾರ್ಮೋಡ ಕವಿದಿದ್ದ ಇಬ್ಬರ ಬದುಕಲ್ಲಿ ಮತ್ತೆ ಬೆಳಕು ಮೂಡಿದ್ದ ಸಂಭ್ರಮದಲ್ಲಿ ''ಇನ್ಮುಂದೆ ಚೆನ್ನಾಗಿರುತ್ತೀವಿ'' ಅಂತ ಮಾಧ್ಯಮಗಳ ಮುಂದೆ ಪರಸ್ಪರ ಸಿಹಿ ಹಂಚಿಕೊಂಡರು. ['ಆಟೋ'ದಲ್ಲಿ ಬಂದ ನಾಗರತ್ನ 'ಲ್ಯಾಂಡ್ ರೋವರ್'ನಲ್ಲಿ ಹೋದ್ರು!]

    English summary
    After the prolonged misunderstanding between Duniya Vijay and his wife Nagaratna, the Divorce case has finally ended on a good note. Here is the cronology of the events of the Duniya Vijay's Divorce case.
    Thursday, November 20, 2014, 18:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X