For Quick Alerts
  ALLOW NOTIFICATIONS  
  For Daily Alerts

  ಮುಗಿಲೆತ್ತರಕ್ಕೆ ಹಾರಿದ 'ಗಾಳಿಪಟ 2': ಶೋ ಸಂಖ್ಯೆಯಲ್ಲಿ ದಿಢೀರ್ ಏರಿಕೆ!

  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್‌ ಭಟ್ ಇಬ್ಬರೂ ಇಂತಹದ್ದೊಂದು ಸಕ್ಸಸ್ ನೋಡದೆ ಅದೆಷ್ಟು ಆಗಿತ್ತೋ. 'ಗಾಳಿಪಟ 2' ಇಬ್ಬರಿಗೂ ಸಖತ್ ರಿಲೀಫ್ ಸಿಕ್ಕಿದೆ. 'ಗಾಳಿಪಟ' ಬಿಟ್ಟ ಗಣೇಶ್ ಹಾಗೂ ಯೋಗರಾಜ್‌ ಭಟ್ ಕೈ ಸಿಗದಷ್ಟು ಎತ್ತರಕ್ಕೆ ಹಾರುತ್ತಿದೆ.

  ಸೋತು ಸೋತು ಸುಣ್ಣವಾಗಿ ಸ್ಯಾಂಡಲ್‌ವುಡ್‌ಗೆ ಈ ವರ್ಷ ಸಖತ್ ಅಂತ ಮತ್ತೆ ಮತ್ತೆ ಸಾಬೀತಾಗುತ್ತಿದೆ. 'ಲವ್ ಮಾಕ್ಟೇಲ್', 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ', 'ವಿಕ್ರಾಂತ್ ರೋಣ' ಇದೂವರೆಗೂ ಬೇಜಾನ್ ಸದ್ದು ಮಾಡಿವೆ. ಈಗ ಗೋಲ್ಡನ್ ಸ್ಟಾರ್ ಹಾಗೂ ಯೋಗರಾಜ್ ಭಟ್ ಸರಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ 'ಗಾಳಿಪಟ 2' ಕೂಡ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿದೆ.

  'ಗಾಳಿಪಟ 2' ಪ್ರೀಮಿಯರ್ ಶೋಗೆ ಹೇಗಿದೆ ರೆಸ್ಪಾನ್ಸ್? ಗಣೇಶ್, ಭಟ್ರು ಕ್ರೇಜ್ ಹೇಗಿದೆ?'ಗಾಳಿಪಟ 2' ಪ್ರೀಮಿಯರ್ ಶೋಗೆ ಹೇಗಿದೆ ರೆಸ್ಪಾನ್ಸ್? ಗಣೇಶ್, ಭಟ್ರು ಕ್ರೇಜ್ ಹೇಗಿದೆ?

  ಕಳೆದೆರಡು ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ 2' ಸಿನಿಮಾದ್ದೇ ಸದ್ದು. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಯಾವುದೇ ಇರಲಿ. ಎರಡೂ ಕಡೆಗಳಲ್ಲಿಯೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ ವಿತರಕರು ಶೋಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ 'ಗಾಳಿಪಟ 2' ವಿತರಣೆ ಮಾಡಿರೋ ಕೆವಿಎನ್ ಸಂಸ್ಥೆಯ ಸುಪ್ರೀತ್ ಫಿಲ್ಮಿ ಬೀಟ್‌ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

  'ಗಾಳಿಪಟ' ಹಾರಾಟ ಬಲು ಜೋರು

  'ಗಾಳಿಪಟ' ಹಾರಾಟ ಬಲು ಜೋರು

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್‌ ಭಟ್ ಕಾಂಬಿನೇಷನ್ ಮತ್ತೆ ವರ್ಕೌಟ್ ಆಗಿದೆ. 14 ವರ್ಷಗಳ ಹಿಂದೆ ಸೃಷ್ಟಿಸಿದ ಹವಾ ಮತ್ತೆ ಸೃಷ್ಟಿಯಾಗಿದೆ. ಇದೇ ಆಗಸ್ಟ್ 12ರಂದು 'ಗಾಳಿಪಟ 2' ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನ ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲೂ ಎರಡನೇ ದಿನ ನೋಡುವವರ ಸಂಖ್ಯೆ ಕೊಂಚ ಇಳಿಕೆ ಕಾಣುತ್ತೆ. ಆದರೆ, ಭಾನುವಾರವೂ (ಆಗಸ್ಟ್ 14) ಸೇರಿ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಗುತ್ತಿದೆ.

  ಶೋ ಸಂಖ್ಯೆ ಹೆಚ್ಚಿಸಿದ ವಿತರಕರು

  ಶೋ ಸಂಖ್ಯೆ ಹೆಚ್ಚಿಸಿದ ವಿತರಕರು

  'ಗಾಳಿಪಟ' ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಸಿನಿಮಾ ಶೋ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. "ಗಾಳಿಪಟ 2 ಸಿನಿಮಾ ಬಗ್ಗೆ ಸಖತ್ ಒಳ್ಳೆ ಸಿಗುತ್ತಿದೆ. ಬಿಡುಗಡೆಯಾದಲ್ಲಿಂದ ಗಳಿಕೆಯಲ್ಲಿ ಏರಿಕೆಯಾಗಿದೆಯೇ ವಿನ: ಇಳಿಕೆಯಾಗಿಲ್ಲ. ಫ್ಯಾಮಿಲಿ ಆಡಿಯನ್ಸ್ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ ಸೇರಿ ಸುಮಾರು 250ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಒಳ್ಳೆ ರೆಸ್ಪಾನ್ಸ್ ಬಂದಿದ್ದರಿಂದ ನಿನ್ನೆಯಿಂದ 40 ರಿಂದ 50 ಶೋಗಳನ್ನು ಹೆಚ್ಚಿಗೆ ಮಾಡಿದ್ದೇವೆ." ಎಂದು ಫಿಲ್ಮಿಬೀಟ್‌ಗೆ ವಿತರಕ ಸುಪ್ರಿತ್ ಮಾಹಿತಿ ನೀಡಿದ್ದಾರೆ.

  ಫ್ಯಾಮಿಲಿ ಆಡಿಯನ್ಸ್ ಹೆಚ್ಚು

  ಫ್ಯಾಮಿಲಿ ಆಡಿಯನ್ಸ್ ಹೆಚ್ಚು

  'ಗಾಳಿಪಟ 2' ಸಿನಿಮಾಗೆ ಫ್ಯಾಮಿಲಿ ಆಡಿಯನ್ಸ್‌ನಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್‌ಗೆ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಈ ಕಾರಣಕ್ಕೆ ಶೋಗಳನ್ನು ಕೂಡ ಹೆಚ್ಚು ಮಾಡಲಾಗಿದೆ. " ಸಾಮಾನ್ಯವಾಗಿ ಮಾರ್ನಿಂಗ್ ಹಾಗೂ ಮ್ಯಾಟನಿ ಶೋಗೆ ಯೂತ್ ಆಡಿಯನ್ಸ್ ಬರ್ತಾರೆ. ಸಂಜೆ ಶೋಗೆ ಫ್ಯಾಮಿಲಿ ಆಡಿಯನ್ಸ್ ಬರುತ್ತಾರೆ. ಆದರೆ, ಗಾಳಿಪಟ ಸಿನಿಮಾಗೆ ಮಾರ್ನಿಂಗ್ ಶೋನಲ್ಲೂ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ. ಅಲ್ಲದೆ ಎಲ್ಲಾ ಕಡೆ ಪಾಸಿಟಿವ್ ಟಾಕ್ ಇದೆ. ಈ ಕಾರಣಕ್ಕೆ ಕಳೆದೆರಡು ದಿನ ಕಲೆಕ್ಷನ್ ಚೆನ್ನಾಗಿದೆ." ಎನ್ನುತ್ತಾರೆ ಸುಪ್ರಿತ್.

  ರಜೆ ಬಳಿಕ ಅಸಲಿ ಆಟ ಶುರು

  ರಜೆ ಬಳಿಕ ಅಸಲಿ ಆಟ ಶುರು

  'ಗಾಳಿಪಟ 2'ಗೆ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದೆ. ಶುಕ್ರವಾರದಿಂದಲೇ ವೀಕೆಂಡ್ ಆರಂಭ ಆಗಿದೆ. ಅಲ್ಲದೆ ಸೋಮವಾರ (ಆಗಸ್ಟ್ 15) ಸ್ವಾತಂತ್ರ್ಯ ದಿನದ ಹಿನ್ನೆಲೆ ರಜೆಯಿದೆ. ಹೀಗಾಗಿ ಒಂದರ ಹಿಂದೊಂದು ರಜೆ ಸಿಕ್ಕಿರೋದೂ ಕೂಡ ಗಾಳಿಪಟ ಸಿನಿಮಾ ಪ್ಲಸ್ ಆಗಿದೆ. " ಸದ್ಯ ರಜೆಯಿದೆ. ಈ ವೇಳೆ ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಆದರೆ, ಮಂಗಳವಾರದಿಂದಲೂ ಸಿನಿಮಾಗೆ ಹೀಗೆ ರೆಸ್ಪಾನ್ಸ್ ಸಿಗುತ್ತಾ ಅನ್ನೋದರ ಮೇಲೆ ಎಲ್ಲಾ ನಿಂತಿದೆ." ಅಂತಾರೆ ಸುಪ್ರಿತ್. ಅಸಲಿಗೆ ಮಂಗಳವಾರದಿಂದ ಮತ್ತೆ ರಜೆಯೆಲ್ಲಾ ಮುಗಿದು, ಜನರು ತಮ್ಮ ಕೆಲಸಗಳಿಗೆ ಮರಳುತ್ತಾರೆ. ಈ ವೇಳೆ ಜನ ಥಿಯೇಟರ್‌ಗೆ ಬಂದರೆ, ಬಾಕ್ಸಾಫೀಸ್ ಗೆದ್ದ ಹಾಗೆನೇ..

  English summary
  Ganesh Diganth Starrer Yogaraj Bhat Directed Gaalipata 2 Movie Shows Increased, Know More.
  Monday, August 15, 2022, 16:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X