»   » ಪ್ರಭಾಸ್ ಹೊಸ ಲುಕ್ ನೋಡಿ ಹೃದಯ ಬಡಿತ ಹೆಚ್ಚಿಸಿಕೊಂಡ ಫ್ಯಾನ್ಸ್

ಪ್ರಭಾಸ್ ಹೊಸ ಲುಕ್ ನೋಡಿ ಹೃದಯ ಬಡಿತ ಹೆಚ್ಚಿಸಿಕೊಂಡ ಫ್ಯಾನ್ಸ್

Posted By:
Subscribe to Filmibeat Kannada

'ಬಾಹುಬಲಿ'ಗಾಗಿ ನಾಲ್ಕೈದು ವರ್ಷ ಮುಡಿಪಾಗಿಟ್ಟಿದ್ದ ನಟ ಪ್ರಭಾಸ್ ಈಗ 'ಸಾಹೋ' ಚಿತ್ರಕ್ಕಾಗಿ ತನ್ನ ಗೆಟಪ್ ಪೂರ್ತಿ ಬದಲಾಯಿಸಿಕೊಂಡಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ ಲಾಂಗ್ ಹೇರ್ ಬಿಟ್ಟು ಮಿಂಚಿದ್ದ ಪ್ರಭಾಸ್ ಈಗ ಹೇರ್ ಕಟ್ ಮಾಡಿ ಸಖತ್ ಹ್ಯಾಂಡ್ ಸಮ್ ಆಗಿದ್ದಾರೆ.

'ಸಾಹೋ' ಚಿತ್ರದ ಲೇಟೆಸ್ಟ್ ಪೋಟೋವೊಂದನ್ನ ರಮೇಶ್ ಬಾಲಾ ಎಂಬುವರು ರಿಲೀಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪ್ರಭಾಸ್ ಅವರ ಈ ಲುಕ್, ಗೆಟಪ್ ನೋಡಿದ ಅಭಿಮಾನಿಗಳಂತೂ ಸಖತ್ ಥ್ರಿಲ್ ಆಗಿದ್ದಾರೆ. ಅದರಲ್ಲೂ ಮಹಿಳಾ ಫ್ಯಾನ್ಸ್ ಅಂತೂ ಪ್ರಭಾಸ್ ಫೋಟೋವನ್ನ ಮುದ್ದಾಡುತ್ತಿದ್ದಾರೆ.

ಅನುಷ್ಕಾ ಬದಲು ಪ್ರಭಾಸ್ ಗೆ ಜೋಡಿ ಆಗ್ತಾಳ ಬಾಲಿವುಡ್ ನಟಿ.!

Prabhas's latest look for Saaho

ಅಂದ್ಹಾಗೆ, 'ಸಾಹೋ' ಚಿತ್ರವನ್ನ ಸುರೇಂದ್ರ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರದುನಿಯಾದಲ್ಲಿ ಕುತೂಹಲ ಹೆಚ್ಚಿಸಿದೆ. ಬಾಲಿವುಡ್ ನಟ ನೀಲ್ ನಿತೀನ್ ಮುಖೇಶ್ ಚಿತ್ರದಲ್ಲಿ ಬಹುಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಶಂಕರ್ ಈಶಾನ್ ಲಾಯ್ ಈ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

ಇನ್ನು ಚಿತ್ರದ ನಾಯಕಿ ಯಾರು ಎಂಬುದು ಅಧಿಕೃತವಾಗಿ ಘೋಷಣೆ ಆಗಿಲ್ಲ. ಕತ್ರಿನಾ ಕೈಫ್, ದಿಶಾ ಪಟಾನಿ, ಶ್ರದ್ಧ ಕಪೂರ್, ಪೂಜಾ ಹೆಗಡೆ, ಸೋನಮ್ ಕಪೂರ್ ಹೆಸರು ಕೇಳಿ ಬಂದಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ 'ಬಾಹುಬಲಿ' ಜೋಡಿ ಅನುಷ್ಕಾ ಶೆಟ್ಟಿ ಅವರೇ 'ಸಾಹೋ' ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಅನುಷ್ಕಾ ಅವರ ತೂಕ ಹೆಚ್ಚಿರುವ ಕಾರಣ ಈ ಚಿತ್ರದಿಂದ ಕೈ ಬಿಡಲಾಗಿದೆ ಎನ್ನಲಾಗಿದೆ. ಹೀಗಾಗಿ, 'ಸಾಹೋ' ಚಿತ್ರದ ನಟಿಯ ಬಗ್ಗೆ ಸ್ಪಷ್ಟನೆ ಇಲ್ಲ.

ಪ್ರಭಾಸ್ ಚಿತ್ರದಿಂದ ಅನುಷ್ಕಾ ಶೆಟ್ಟಿಗೆ ಕೋಕ್.!

English summary
Prabhas's latest look for his forthcoming multilingual project Saaho has gone viral on the internet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada