ಸುದೀಪ್ ಮಾಡಬೇಕಿದ್ದ ಈ ಪಾತ್ರಕ್ಕೆ ರಾಣಾ ದಗ್ಗುಬಾಟಿ ಎಂಟ್ರಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಬೇಕಿದ್ದ ಪಾತ್ರ ಈಗ ರಾಣಾ ದಗ್ಗುಬಾಟಿ ಪಾಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಾರೆ ಕಿಚ್ಚ, ಪವನ್ ಕಲ್ಯಾಣ್ ಜೊತೆ ತೆರೆಹಂಚಿಕೊಳ್ಳಬೇಕಿತ್ತು. ಆದರೀಗ ಸುದೀಪ್ ಬದಲಿಗೆ ರಾಣಾ ನಟಿಸುತ್ತಿದ್ದಾರೆ.
Recommended Video
ಹೌದು, ಮಲಯಾಳಂ ಸೂಪರ್ ಹಿಟ್ ಅಯ್ಯಪ್ಪನುಂ ಕೋಶಿಯುಂ ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದೆ. ಈಗಾಗಲೇ ಚಿತ್ರದ ಮುಹೂರ್ತ ನರೆವೇರಿದ್ದು, ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟಿಸುವುದು ಅಧಿಕೃತವಾಗಿದೆ. ಅಂದಹಾಗೆ ಈ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತೆ ಎನ್ನುವ ಸುದ್ದಿ ಅನೇಕ ತಿಂಗಳಿಂದ ಕೇಳಿಬರುತ್ತಿತ್ತು. ಪವನ್ ಕಲ್ಯಾಣ್ ನಟಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ರಾಣಾ ದಗ್ಗುಬಾಟಿ ಮಾಡುತ್ತಿರುವ ಪಾತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿಬರುತ್ತಿತ್ತು. ವಿಶೇಷ ಎಂದರೇ ಈ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಮುಂದೆ ಓದಿ..

ಅಯ್ಯಪ್ಪನುಂ ಕೋಶಿಯುಂನಲ್ಲಿ ಸುದೀಪ್ ನಟಿಸಬೇಕಿತ್ತು
ಕಿಚ್ಚ ಸುದೀಪ್, ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ, ಅಯ್ಯಪ್ಪನುಂ ಕೋಶಿಯುಂ ಚಿತ್ರದ ರಿಮೇಕ್ ನಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೆಲವು ತಿಂಗಳ ಹಿಂದೆ ಕೇಳಿಬರುತ್ತಿತ್ತು. ಮೂಲಗಳ ಪ್ರಕಾರ ಈ ಪಾತ್ರಕ್ಕೆ ಸುದೀಪ್ ಅವರಿಗೆ ಆಫರ್ ಮಾಡಲಾಗಿತಂತೆ. ಆದರೆ ಕಾರಣಾಂತರಗಳಿಂದ ಸುದೀಪ್ ಈ ಸಿನಿಮಾದ ಭಾಗವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪೃಥ್ವಿರಾಜ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ
ಮಲಯಾಳಂನ ಅಯ್ಯಪ್ಪನಂ ಕೋಶಿಯುಂ ಚಿತ್ರದಲ್ಲಿ ಬಿಜು ಮೆನನ್ ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದಾರೆ. ಪೃಥ್ವರಾಜ್ ಪಾತ್ರಕ್ಕೆ ಕಿಚ್ಚನ ಹೆಸರು ಕೇಳಿಬಂದಿತ್ತು, ಆದರೀಗ ಈ ಪಾತ್ರ ರಾಣಾ ದಗ್ಗುಬಾಟಿ ಪಾಲಾಗಿದೆ.

ಕೆ. ಚಂದ್ರ ನಿರ್ದೇಶನ
ಈ ಸಿನಿಮಾಗೆ ಸಾಗರ್ ಕೆ ಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕೃತವಾಗಿ ಈ ಚಿತ್ರದ ಮುಹೂರ್ತ ನಿನ್ನೆ (ಡಿಸೆಂಬರ್ 21) ನೆರವೇರಿದ್ದು, ಪವನ್ ಕಲ್ಯಾಣ್ ಮಾತ್ರ ಭಾಗಿಯಾಗಿದ್ದರು. ತಮನ್ ಎಸ್ ಸಂಗೀತ ಹಾಗೂ ನವೀನ್ ನೂಲಿ ಸಂಕಲನ ಇದೆ. ಪ್ರಸಾದ್ ಮುರೆಲ್ಲ ಅವರ ಛಾಯಾಗ್ರಹಣ ಹೊಂದಿದೆ.

ಸಾಯಿ ಪಲ್ಲವಿ ನಾಯಕಿ ಸಾಧ್ಯತೆ?
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಸಿನಿಮಾ ಅಂದ್ಮೇಲೆ ಈ ಪ್ರಾಜೆಕ್ಟ್ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಅಂದ್ಹಾಗೆ, ಪವನ್ ಕಲ್ಯಾಣ್‌ಗೆ ಜೋಡಿಯಾಗಿ ಸಾಯಿ ಪಲ್ಲವಿ ಅವರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಈ ಕುರಿತು ಸುದ್ದಿ ಸಹ ಆಗಿತ್ತು. ಆದ್ರೆ, ಅಧಿಕೃತ ಮಾಡಿಲ್ಲ.


Click it and Unblock the Notifications











