»   » ದರ್ಶನ್ ಬಗ್ಗೆ ಮೆಚ್ಚುಗೆ ಮಾತನಾಡಿದ ಮಂಗಳೂರು ಬೆಡಗಿ

ದರ್ಶನ್ ಬಗ್ಗೆ ಮೆಚ್ಚುಗೆ ಮಾತನಾಡಿದ ಮಂಗಳೂರು ಬೆಡಗಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ಜೊತೆ ಸಿನಿಮಾದಲ್ಲಿ ಅಭಿನಯ ಮಾಡಿದ ಪ್ರತಿ ನಾಯಕಿಯರಿಗೆ ಇದೇ ಅನುಭವ ಆಗಿರುತ್ತೆ. ದೂರದಿಂದ ನೋಡಿ ಈತ ಹೊರಟು, ಜೋರು ಎಂದುಕೊಂಡಿದ್ದವರೆಲ್ಲಾ ಜೊತೆಯಲ್ಲಿ ಕೆಲಸ ಮಾಡಿದ ನಂತರ ದರ್ಶನ್ ಅವರ ಗುಣಗಾನ ಮಾಡಲು ಆರಂಭಿಸುತ್ತಾರೆ.

ಅದೇ ಅನುಭವ ಮಂಗಳೂರಿನ ಬೆಡಗಿ ತಾನ್ಯ ಹೋಪೆ ಅವರಿಗೆ ಆಗಿದೆ. ನಟಿ ತಾನ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಯಜಮಾನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ತನ್ನ ಪಾಲಿನ ಚಿತ್ರೀಕರಣ ಕಂಪ್ಲೀಟ್ ಮಾಡಿ ಬಂದಿರುವ ನಟಿ ದರ್ಶನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಹಾಡಿದ್ದಾರೆ.

ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ರಕ್ಷಿತಾಗೆ ಈಗಲೂ ಇದೆ

ದರ್ಶನ್ ಮಾತ್ರವಲ್ಲದೆ ಕರ್ನಾಟಕದ ಕ್ರಶ್ ರಶ್ಮಿಕಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಟಿ ತಾನ್ಯ ಯಜಮಾನ ಚಿತ್ರತಂಡ ಹಾಗೂ ದರ್ಶನ್ ಬಗ್ಗೆ ಹೇಳಿದ ಮಾತುಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಡಿ ಬಾಸ್ ರನ್ನ ಮೆಚ್ಚಿದ ನಟಿ

ದರ್ಶನ್ ಅವರ ಜೊತೆಯಲ್ಲಿ ಯಜಮಾನ ಸಿನಿಮಾದಲ್ಲಿ ಕೆಲಸ ಮಾಡಿದ ನಂತರ ನಟಿ ತಾನ್ಯ ಹೋಪ್ ಡಿ ಬಾಸ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ದರ್ಶನ್ ತುಂಬಾ ಸಹಕಾರಿ ಚಿತ್ರೀಕರಣದ ಸಮಯದಲ್ಲಿ ಅಭಿನಯಿಸಲು ತುಂಬಾ ಸಹಾಯ ಮಾಡಿದರು ಎಂದಿದ್ದಾರೆ.

ಉತ್ಸಾಹದ ಹುಡುಗಿ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ತಾನ್ಯ ರಶ್ಮಿಕಾ ಅವರನ್ನು ಮೊದಲಿಗೆ ಭೇಟಿ ಮಾಡಿದ್ದು ಚಿತ್ರೀಕರಣದ ಸಂದರ್ಭದಲ್ಲಿ ತುಂಬಾ ಲವಲವಿಕೆ ಇರುವ ಹಾಗೂ ಸದಾ ಉತ್ಸಾಹದಿಂದ ಇರುತ್ತಾರೆ ಎಂದಿದ್ದಾರೆ.

ಎರಡನೇ ಚಿತ್ರದಲ್ಲಿ ತಾನ್ಯ

ತಾನ್ಯ ಹೋಪ್ ಅವರಿಗೆ ಯಜಮಾನ ಕನ್ನಡದ ಎರಡನೇ ಸಿನಿಮಾ ಮೊದಲಿಗೆ ಉಪ್ಪಿ ಜೊತೆಯಲ್ಲಿ ಹೋಂ ಮಿನಿಷ್ಟರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದು ಯಜಮಾನದಲ್ಲಿ ಎರಡನೇ ನಾಕಿಯಾಗಿ ಅಭಿನಯ ಮಾಡಿದ್ದಾರೆ.

ಚಿತ್ರತಂಡ ತುಂಬಾ ಸಹಕಾರಿ

ನಿರ್ದೇಶಕ ಪೋನ್ ಕುಮಾರ್, ನಿರ್ಮಾಪಕಿ ಶೈಲಜಾ ನಾಗ್ ನನಗೆ ಉತ್ತೇಜನ ನೀಡುತ್ತಿದ್ದರು. ಇಡೀ ಚಿತ್ರತಂಡ ನನ್ನನ್ನು ಚೆನ್ನಾಗಿ ನೆಡೆಸಿಕೊಂಡಿದೆ. ಯಜಮಾನ ಸಿನಿಮಾತಂಡದಲ್ಲಿ ಭಾಗಿ ಆಗಿದ್ದು ಖುಷಿ ಎಂದಿದ್ದಾರೆ ನಟಿ ತಾನ್ಯ.

ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದಾಸ ದರ್ಶನ್

English summary
Kannada actress Tanya hope has said that working with Darshan it's a great experience, she has acted in two films in Kannada. The heroine acted as the second heroine in the Yajamana film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X