twitter
    For Quick Alerts
    ALLOW NOTIFICATIONS  
    For Daily Alerts

    'KGF 2' ರಿಲೀಸ್ ಆಗಿ 13ನೇ ದಿನ: 950 ಕೋಟಿಗೆ ಇನ್ನೂ ಹತ್ತಿರ!

    |

    ಭಾರತದಲ್ಲಿ ಈಗೇನಿದ್ದರೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಜಮಾನ. ಪ್ರಾದೇಶಿಕ ಭಾಷೆಯ ಸಿನಿಮಾಗಳು ತನ್ನ ಗಡಿಯನ್ನೂ ದಾಟಿ ಬಾಕ್ಸಾಫೀಸ್‌ ಒಳಗೆ ನುಗ್ಗಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿವೆ. ಅದರಲ್ಲೂ ಕೋವಿಡ್ ತಗ್ಗಿದ ಬಳಿಕ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಜೋರಾಗಿದೆ. ಅದರಲ್ಲೂ 'ಪುಷ್ಪ', RRR, 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ರೀತಿಗೆ ಇಡೀ ವಿಶ್ವವೇ ತಲೆಕೆಡಿಸಿಕೊಂಡಿದೆ.

    'ಕೆಜಿಎಫ್ 2' ಇನ್ನೂ ಥಿಯೇಟರ್‌ಗಳಲ್ಲಿ ತನ್ನ ನಾಗಲೋಟವನ್ನು ಇನ್ನೂ ನಿಲ್ಲಿಸಿಲ್ಲ. ವೀಕೆಂಡ್ ಬರಲಿ, ಇಲ್ಲಾ ವೀಕ್ ಡೇಸ್‌ ಇರಲಿ. ಯಾವುದೂ ಮ್ಯಾಟರೇ ಆಗುತ್ತಿಲ್ಲ. ಐದೂ ಭಾಷೆಯಲ್ಲೂ 'ಕೆಜಿಎಫ್ 2' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 'ಕೆಜಿಎಫ್ 2' ಸಿನಿಮಾ 13ನೇ ದಿನವೂ ಥಿಯೇಟರ್‌ನಲ್ಲಿ ತನ್ನ ಓಟವನ್ನು ಮುಂದುವರೆಸಿದೆ. ಹಾಗಿದ್ದರೆ, 13ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? 1000 ಕೋಟಿಗೆ ಇನ್ನೆಷ್ಟು ಕೋಟಿ ಬೇಕು ಅನ್ನುವುದನ್ನು ತಿಳಿಯಲು ಮುಂದೆ ಓದಿ.

    'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?

    13ನೇ ದಿನ 'KGF 2' ಸಿನಿಮಾ ಗಳಿಸಿದ್ದೆಷ್ಟು?

    13ನೇ ದಿನ 'KGF 2' ಸಿನಿಮಾ ಗಳಿಸಿದ್ದೆಷ್ಟು?

    'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿಗಟ್ಟಲೇ ಹಣ ಕೊಳ್ಳೆ ಹೊಡೆಯುವುದನ್ನು ಇನ್ನೂ ನಿಲ್ಲಿಸಿಲ್ಲ. 13ನೇ ದಿನವೂ 'ಕೆಜಿಎಫ್ 2' ಬಾಕ್ಸಾಫೀಸ್ ಆರಾಮಾಗಿ ಓಟವನ್ನು ಮುಂದುವರೆಸಿದೆ. 13ನೇ ದಿನ ವಿಶ್ವದಾದ್ಯಂತ 'ಕೆಜಿಎಫ್ 2' ಕಲೆಕ್ಷನ್ 20 ಕೋಟಿ ದಾಟಿದೆ. ಮೂರನೇ ವಾರದಲ್ಲಿ ಇಷ್ಟೊಂದು ಗಳಿಕೆ ಕಂಡಿರುವುದು ಅದ್ಭುತ ಎಂದೇ ಹೇಳಲಾಗುತ್ತಿದೆ. ಈ ಮೂಲಕ 'ಕೆಜಿಎಫ್ 2' ಇನ್ನೂ ತನ್ನ ಸ್ಟ್ರಾಂಗ್ ಹೋಲ್ಡ್ ಅನ್ನು ಮುಂದುವರೆಸಿದೆ.

    8 ದಿನ 'ಕೆಜಿಎಫ್ 2' ದೋಚಿದ್ದೆಷ್ಟು? ಆಮಿರ್ ಖಾನ್ 'PK' ದಾಖಲೆ ಮುರಿಯೋಕೆ ಆಗುತ್ತಾ?8 ದಿನ 'ಕೆಜಿಎಫ್ 2' ದೋಚಿದ್ದೆಷ್ಟು? ಆಮಿರ್ ಖಾನ್ 'PK' ದಾಖಲೆ ಮುರಿಯೋಕೆ ಆಗುತ್ತಾ?

    13ನೇ ದಿನಗಳ ಒಟ್ಟು ಬಾಕ್ಸಾಫೀಸ್ ಗಳಿಕೆ ಎಷ್ಟು?

    13ನೇ ದಿನಗಳ ಒಟ್ಟು ಬಾಕ್ಸಾಫೀಸ್ ಗಳಿಕೆ ಎಷ್ಟು?

    ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ನಾಗಲೋಟಕ್ಕೆ ಇನ್ನೂ ಯಾರೂ ಬ್ರೇಕ್ ಹಾಕಿಲ್ಲ. ನಿರಂತರವಾಗಿ 13ನೇ ದಿನವೂ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಯಾವುದೇ ಹೊಸ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವಂತಿದೆ ಕಲೆಕ್ಷನ್. ಈ 13 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ₹ 945.35 ಕೋಟಿ ಗಳಿಕೆ ಕಂಡಿದೆ. ಇನ್ನು 5 ಕೋಟಿ ಗಳಿಸಿದ್ದರೆ, ₹ 950 ಕೋಟಿ ಕ್ಲಬ್ ಸೇರುತ್ತಿತ್ತು. ಈಗ ₹ 1000 ಕೋಟಿ ಕ್ಲಬ್ ಅನ್ನು ಇನ್ನು ಎಷ್ಟು ದಿನಕ್ಕೆ ಕಂಪ್ಲೀಟ್ ಮಾಡಲಿದೆ ಎಂಬುದು ಕುತೂಹಲಕ್ಕೀಡು ಮಾಡಿದೆ.


    'KGF 2' 13 ದಿನಗಳ ಬಾಕ್ಸಾಫೀಸ್ ಕಲೆಕ್ಷನ್

    1ನೇ ದಿನ Rs 164.20 Cr (ಅಂದಾಜು)
    2ನೇ ದಿನ Rs 128.90 Cr (ಅಂದಾಜು)
    3ನೇ ದಿನ: Rs 137.10 Cr (ಅಂದಾಜು)
    4ನೇ ದಿನ: Rs 127.25 Cr (ಅಂದಾಜು)
    5ನೇ ದಿನ: Rs 66.35 Cr (ಅಂದಾಜು)
    6ನೇ ದಿನ: Rs 52.35 Cr (ಅಂದಾಜು)
    7ನೇ ದಿನ: Rs 43.15 Cr (ಅಂದಾಜು)
    8ನೇ ದಿನ: Rs 31.05 Cr (ಅಂದಾಜು)
    9ನೇ ದಿನ: Rs 25.05 Cr (ಅಂದಾಜು) (Updated)
    10ನೇ ದಿನ: Rs 55.85 Cr (ಅಂದಾಜು) (Updated)
    11 ನೇ ದಿನ Rs 69.30 Cr (ಅಂದಾಜು) (Updated)
    12ನೇ ದಿನ Rs 24.80 Cr (ಅಂದಾಜು) (Updated)
    13ನೇ ದಿನ Rs 20.00 Cr (ಅಂದಾಜು)

    ಒಟ್ಟು: Rs 945.35 Cr (ಅಂದಾಜು)

    'ದಂಗಲ್' ದಾಖಲೆ ಮುರಿಯಲು ಇನ್ನೆಷ್ಟು ಬೇಕು?

    'ಕೆಜಿಎಫ್ 2' ಗಳಿಕೆ ಅಚ್ಚರಿ ಎನಿಸುತ್ತಿರೋದು ಹಿಂದಿ ಬೆಲ್ಟ್‌ ಏರಿಯಾದಲ್ಲಿ. ಇಲ್ಲಿ ಬಾಲಿವುಡ್‌ನ ಸೂಪರ್‌ ಸ್ಟಾರ್ ಸಿನಿಮಾಗಳನ್ನೂ ಮೀರಿಸುವಷ್ಟು ಗಳಿಕೆ ಕಾಣುತ್ತಿದೆ. ಈ 13 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ₹ 7.48 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ₹ 336.88 ಗಳಿಸಿದೆ. ಈ ಮೂಲಕ ಆಮೀರ್ ಖಾನ್ ಸಿನಿಮಾ 'ದಂಗಲ್' ಗಳಿಸಿದ 387 ಕೋಟಿ ಗಳಿಕೆಯನ್ನು 'ಕೆಜಿಎಫ್ 2' ಪಾಸ್ ಮಾಡುತ್ತಾ? ಅನ್ನೋ ಕುತೂಹಲವಿದೆ.

    7 ದಿನಗಳಲ್ಲಿ 700 ಕೋಟಿ ಗಡಿ ದಾಟಿದ 'ಕೆಜಿಎಫ್ 2': ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲೆಷ್ಟು?7 ದಿನಗಳಲ್ಲಿ 700 ಕೋಟಿ ಗಡಿ ದಾಟಿದ 'ಕೆಜಿಎಫ್ 2': ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲೆಷ್ಟು?

    ಟಾಲಿವುಡ್‌ನಲ್ಲಿ ಸಖತ್ ರೆಸ್ಪಾನ್ಸ್

    ಟಾಲಿವುಡ್‌ನಲ್ಲಿ ಸಖತ್ ರೆಸ್ಪಾನ್ಸ್

    13ನೇ ದಿನ ಟಾಲಿವುಡ್‌ನಲ್ಲೂ ರೆಸ್ಪಾನ್ಸ್ ಚೆನ್ನಾಗಿದೆ. ಗುಂಟೂರಿನಲ್ಲಿ 4.21 ಕೋಟಿ, ನೆಲ್ಲೂರಿನಲ್ಲಿ 2.55 ಕೋಟಿ ಗಳಿಸಿದೆ. ಈ ಮೂಲಕ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಒಟ್ಟು ಗಳಿಕೆ ಸುಮಾರು 121.30 ಕೋಟಿ ಗಳಿಸಿದೆ. ಇನ್ನು ಈ ವಾರ ತೆಲುಗಿನಲ್ಲಿ 'ಆಚಾರ್ಯ' ಸಿನಿಮಾ ಬಿಡುಗಡೆಯಾಗಲಿದೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಚ್ಚಿಕೊಂಡರೆ, 'ಕೆಜಿಎಫ್ 2'ಗೆ ಈ ವಾರದಿಂದ ಪೆಟ್ಟು ಬೀಳುವುದು ಗ್ಯಾರಂಟಿ.

    English summary
    Yash Starrer KGF Chapter 2 Day 13 Worldwide Box Office Collection Report.
    Wednesday, April 27, 2022, 17:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X