twitter
    For Quick Alerts
    ALLOW NOTIFICATIONS  
    For Daily Alerts

    ಹಾಲಿವುಡ್ ಸಿನಿಮಾಗಳ ಸಾಲಿನಲ್ಲಿ ಮೌಳಿ ದೃಶ್ಯಕಾವ್ಯ: 'ಕಾಂತಾರ' - 'KGF - 2' ಹಿಂದಿಕ್ಕಿ 'RRR' ಹೊಸ ದಾಖಲೆ

    |

    ಎಸ್‌.ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾ ಆರ್ಭಟ ಇನ್ನು ನಿಂತಿಲ್ಲ. ಜಪಾನ್‌ ಭಾಷೆಗೆ ಡಬ್ ಆಗಿ ಸಿನಿಮಾ ಸದ್ದು ಮಾಡ್ತಿದೆ. ಹೊರ ದೇಶಗಳಲ್ಲಿ ರಾಮ್‌-ಭೀಮ್ ಕ್ರೇಜ್ ತಾರಕಕ್ಕೇರಿದೆ. ಇದೀಗ 'RRR' ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

    ಹಲವು ದೇಶಗಳಲ್ಲಿ 'RRR' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗ್ತಿದೆ. ಇದು ನಿರ್ದೇಶಕ ರಾಜಮೌಳಿಗೂ ಅಚ್ಚರಿ ಉಂಟುಮಾಡಿದೆ. ಚಿತ್ರದ ಯಾವ ಅಂಶ ಹೊರ ದೇಶದ ಪ್ರೇಕ್ಷಕರಿಗೆ ಇಷ್ಟವಾಯಿತು ಎನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮಾರ್ಚ್ 24ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾ 1150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಲ್ಲೂರಿ ಸೀತಾರಾಮರಾಜು ಆಗಿ ರಾಮ್‌ಚರಣ್ ಹಾಗೂ ಕೋಮುರಂ ಭೀಮ್ ಅವತಾರದಲ್ಲಿ ಜ್ಯೂ.ಎನ್‌ಟಿಆರ್ ಪರ್ಫಾರ್ಮೆನ್ಸ್‌ಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು.

    'ಕೆಜಿಎಫ್', 'RRR' ಬಗ್ಗೆ ಆಸಕ್ತಿಕರ ಅಭಿಪ್ರಾಯ ಹಂಚಿಕೊಂಡ ರಾಣಾ ದಗ್ಗುಬಾಟಿ'ಕೆಜಿಎಫ್', 'RRR' ಬಗ್ಗೆ ಆಸಕ್ತಿಕರ ಅಭಿಪ್ರಾಯ ಹಂಚಿಕೊಂಡ ರಾಣಾ ದಗ್ಗುಬಾಟಿ

    ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ತೆಗೆದುಕೊಂಡು ಒಂದು ಕಾಲ್ಪನಿಕ ಕಥೆ ಕಟ್ಟಿ ರಾಜಮೌಳಿ ಸಕ್ಸಸ್ ಕಂಡಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. IMDB ಆಯ್ಕೆ ಮಾಡಿರುವ ಈ ವರ್ಷದ ಟಾಪ್ 50 ಸಿನಿಮಾಗಳ ಲಿಸ್ಟ್‌ನಲ್ಲಿ 'RRR' ಕೂಡ ಜಾಗ ಮಾಡಿಕೊಂಡಿದೆ.

     IMDB ಟಾಪ್‌ 50 ಚಿತ್ರಗಳ ಲಿಸ್ಟ್‌ನಲ್ಲಿ 'RRR'

    IMDB ಟಾಪ್‌ 50 ಚಿತ್ರಗಳ ಲಿಸ್ಟ್‌ನಲ್ಲಿ 'RRR'

    ಹೌದು IMDB (ಇಂಟರ್ನೆಟ್‌ ಮೂವಿ ಡೇಟಾ ಬೇಸ್) ಈ ವರ್ಷದ ಟಾಪ್ 50 ಸಿನಿಮಾಗಳ ಲಿಸ್ಟ್ ಸಿದ್ಧಪಡಿಸಿದೆ. ಈ ಲಿಸ್ಟ್‌ನಲ್ಲಿ ಭಾರತದ 'RRR' ಸಿನಿಮಾ ಮಾತ್ರ ಕಾಣಿಸಿಕೊಂಡಿದೆ. ಈ ಬಗ್ಗೆ 'RRR' ಚಿತ್ರತಂಡ ಕೂಡ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. ಬಹಳ ದೊಡ್ಡದಾಗಿ ಸದ್ದು ಮಾಡಿದ್ದ 'ಕಾಶ್ಮೀರಿ ಫೈಲ್ಸ್', ಕನ್ನಡದ 'KGF- 2' ಹಾಗೂ 'ಕಾಂತಾರ' ಚಿತ್ರಗಳಿಗೂ ಈ ಲಿಸ್ಟ್‌ನಲ್ಲಿ ಜಾಗ ಸಿಕ್ಕಿಲ್ಲ.

    IMDB ರೇಟಿಂಗ್‌ನಲ್ಲಿ 'ಕಾಂತಾರ' ದಾಖಲೆ

    IMDB ರೇಟಿಂಗ್‌ನಲ್ಲಿ 'ಕಾಂತಾರ' ದಾಖಲೆ

    ಈ ವರ್ಷದ ಟಾಪ್ 50 ಸಿನಿಮಾಗಳ ಲಿಸ್ಟ್‌ನಲ್ಲಿ 'ಕಾಂತಾರ' ಇಲ್ಲದೇ ಇದ್ದರೂ ಸಾರ್ವಕಾಲಿಕ ಅತಿ ಹೆಚ್ಚು IMDb ರೇಟಿಂಗ್ ಪಡೆದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 'ಕಾಂತಾರ' ಮೊದಲ ಸ್ಥಾನ ಪಡೆದುಕೊಂಡಿತ್ತು. 9.6 ರೇಟಿಂಗ್ ಪಡೆದು ದಾಖಲೆ ಬರೆದಿತ್ತು. ಭಾರತೀಯ ಚಿತ್ರರಂಗದಲ್ಲೇ ಮತ್ಯಾವುದೇ ಸಿನಿಮಾ ಈ ಮೈಲಿಗಲ್ಲು ಸಾಧಿಸಿಲ್ಲ.

    ಜಪಾನ್‌ನಲ್ಲಿ 'RRR' ಅಬ್ಬರ

    ಜಪಾನ್‌ನಲ್ಲಿ 'RRR' ಅಬ್ಬರ

    ಅಕ್ಟೋಬರ್ 21ಕ್ಕೆ ಜಪಾನ್ ಭಾಷೆಗೆ ಡಬ್ ಆಗಿ 'RRR' ಸಿನಿಮಾ ತೆರೆಗಪ್ಪಳಿಸಿತ್ತು. ಈ ಸಿನಿಮಾ ಭಾರತದ ಹಲವು ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ಸದ್ದು ಮಾಡಿದ್ದವು. ಆ ದಾಖಲೆಗಳನ್ನೆಲ್ಲಾ ಮುರಿದು 'RRR' 2ನೇ ಸ್ಥಾನದಲ್ಲಿದೆ. ರಜನಿಕಾಂತ್ ನಟನೆಯ 'ಮುತ್ತು' ಅತಿ ಹೆಚ್ಚು ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ. ರಾಜಮೌಳಿ ಸಿನಿಮಾ ಅಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.

    'RRR' ಚಿತ್ರಕ್ಕೆ ಹಾಲಿವುಡ್‌ ಮಂದಿ ಮೆಚ್ಚುಗೆ

    'RRR' ಚಿತ್ರಕ್ಕೆ ಹಾಲಿವುಡ್‌ ಮಂದಿ ಮೆಚ್ಚುಗೆ

    ಬಾಕ್ಸಾಫೀಸ್‌ ಸಕ್ಸಸ್‌ ಕಂಡಿದ್ದ 'RRR' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿ ಪ್ರಪಂಚದ ಮೂಲೆಮೂಲೆಗೆ ತಲುಪಿತ್ತು. ಹಾಲಿವುಡ್ ಪ್ರೇಕ್ಷಕರು ಸಿನಿಮಾ ನೋಡಿ ಬಹುಪರಾಕ್ ಅಂದಿದ್ದರು. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಮೌಳಿ ಅಂಡ್ ಟೀಮ್ ಪ್ರಯತ್ನಕ್ಕೆ ಜೈಕಾರ ಹಾಕಿದ್ದರು. ಇದೇ ಕಾರಣಕ್ಕೆ IMDB ಆಯ್ಕೆ ಮಾಡಿರುವ ಈ ವರ್ಷದ ಟಾಪ್ 50 ಸಿನಿಮಾಗಳ ಲಿಸ್ಟ್‌ನಲ್ಲಿ 'RRR' ಕಾಣಿಸಿಕೊಂಡಿರುವ ಸಾಧ್ಯತೆಯಿದೆ.

    English summary
    Rajamouli's RRR gets featured in IMDb's best of 2022 list. The only Indian film in the list. know more.
    Friday, December 2, 2022, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X