For Quick Alerts
  ALLOW NOTIFICATIONS  
  For Daily Alerts

  ದುಬಾರಿ ಸೀರೆ ಧರಿಸಿ 'ಲವ್ ಸ್ಟೋರಿ' ಪ್ರಚಾರಕ್ಕೆ ಹೊರಟ ಸಾಯಿ ಪಲ್ಲವಿ ನಾಚಿ ನೀರಾಗಿದ್ದೇಕೆ?

  |

  ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ಬಹುನಿರೀಕ್ಷೆಯ 'ಲವ್ ಸ್ಟೋರಿ' ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಚಿತ್ರದ ಹಾಡು ಸೂಪರ್ ಹಿಟ್ ಆದ ಸಂತಸದಲ್ಲೇ ಚಿತ್ರತಂಡ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು, ಸಾಯಿ ಪಲ್ಲವಿ ಕೂಡ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ.

  ತೆಲುಗು ನಟ ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಂಡಿರುವ ಲವ್ ಸ್ಟೋರಿ ಸಿನಿಮಾ ಈಗಾಗಲೇ ಹಾಡುಗಳು ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ದುಪ್ಪಟ್ಟು ಮಾಡಿದೆ. ನ್ಯೂಚುರಲ್ ಲುಕ್ ಮತ್ತು ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

  ಅಲ್ಲು ಅರ್ಜುನ್ ಸೂಪರ್ ಹಿಟ್ 'ಬುಟ್ಟ ಬೊಮ್ಮ' ಹಾಡಿನ ದಾಖಲೆ ಮುರಿದ ಸಾಯಿ ಪಲ್ಲವಿ ಹೊಸ ಸಾಂಗ್ಅಲ್ಲು ಅರ್ಜುನ್ ಸೂಪರ್ ಹಿಟ್ 'ಬುಟ್ಟ ಬೊಮ್ಮ' ಹಾಡಿನ ದಾಖಲೆ ಮುರಿದ ಸಾಯಿ ಪಲ್ಲವಿ ಹೊಸ ಸಾಂಗ್

  ನಗ ಚೈತನ್ಯ ಮತ್ತು ಸಾಯಿ ಪಲ್ಲವಿ ಲವ್ ಸ್ಟೋರಿ ಸಿನಿಮಾ ಶೇಖರ್ ಕಮ್ಮುಲ ಸಾರಥ್ಯದಲ್ಲಿ ಮೂಡಿ ಬರುತ್ತಿರುತ್ತಿದೆ. ವಿಶೇಷ ಎಂದರೆ ಇತ್ತೀಚಿಗೆ ಚಿತ್ರತಂಡ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ನಟಿ ಸಾಯಿ ಪಲ್ಲವಿ ಲುಕ್ ಮತ್ತು ನಾಚಿ ನೀರಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸೀರೆಯಲ್ಲಿ ಕಾಣಿಸಿಕೊಂಡಿರುವ ನ್ಯೂಚುರಲ್ ಸುಂದರಿ ಪಲ್ಲವಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ನೀಲಿ ಬಣ್ಣದ ಸೀರೆ ಧರಿಸಿದ್ದ ಸಾಯಿ ಪಲ್ಲಿವಿ, ಸಿಲ್ವರ್ ಆಭರಣ ಧರಿಸಿದ್ದಾರೆ. ಅಂದಹಾಗೆ ಪ್ರೇಮಂ ಸುಂದರಿ ಧರಿಸಿರುವ ಸೀರೆಯ ಬೆಲೆ 1 ಲಕ್ಷ ರೂ. ದುಬಾರಿ ಸೀರೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಸಾಯಿ ಪಲ್ಲವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಕ್ಯಾಮರಾ ಮುಂದೆ ನಾಚಿ ನೀರಾಗಿರುವ ಸಾಯಿ ಪಲ್ಲವಿ ಪೋಸ್ ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಬಹುತೇಕ ನಟಿ ಮಣಿಯರು ಮೇಕಪ್ ಇಲ್ಲದೆ ಮನೆಯಿಂದ ಹೊರಬರುವುದಿಲ್ಲ. ಆದರೆ ಸಾಯಿ ಪಲ್ಲವಿ ಮೇಕಪ್ ನಿಂದ ತುಂಬಾ ದೂರ. ವಿಶೇಷ ಎಂದರೆ ತೆರೆಮೇಲೂ ಕೂಡ ಮೇಕಪ್ ಹಾಕಿ ನಟಿಸುವುದನ್ನು ಪಲ್ಲವಿ ಇಷ್ಟ ಪಡುವುದಿಲ್ಲ. ಮೇಕಪ್ ಇಲ್ಲದೆ ನಟಿಸುವ ಏಕೈಕ ನಟಿ ಸಾಯಿ ಪಲ್ಲವಿ.

  ಇನ್ನು ಲವ್ ಸ್ಟೋರಿ ವಿಚಾರಕ್ಕೆ ಬರುವುದಾದರೆ ಹೆಸರೇ ಹೇಳುವ ಹಾಗೆ ಇದು ರೊಮ್ಯಾಂಟಿಕ್ ಸಿನಿಮಾ. ಸದ್ಯ ಸಿನಿಮಾದಿಂದ ರಿಲೀಸ್ ಆಗಿರುವ ಸಾರಂಗ ದರಿಯಾ ಹಾಡು 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ. ಸಿನಿಮಾ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

  ಜಿಮ್ ಮೇಲಿರುವ ನಿರ್ಬಂಧ ತೆಗೆಯುವಂತೆ ಯಶ್ ಒತ್ತಾಯ | Filmibeat Kannada
  English summary
  Actress Sai Pallavi looks gorgeous in blue saree for Love Story promotion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X