For Quick Alerts
  ALLOW NOTIFICATIONS  
  For Daily Alerts

  ಕನಿಕಾ ಕಪೂರ್ ಸಂಪರ್ಕಕ್ಕೆ ಬಂದಿದ್ದ 266 ಮಂದಿಯ ಪತ್ತೆ, 66 ಜನರಲ್ಲಿ ಸೋಂಕು ನೆಗೆಟಿವ್

  |

  ಕೊರೊನಾ ವೈರಸ್ ಹೊತ್ತುತಂದು ಆತಂಕ ಮೂಡಿಸಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಸಂಪರ್ಕಕ್ಕೆ ಬಂದದ್ದರು ಎನ್ನಲಾದ ಜನರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿಸಲಾಗಿದೆ. ಲಂಡನ್‌ನಿಂದ ಲಕ್ನೋಗೆ ಹಿಂದಿರುಗಿದ್ದ ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಆದರೆ ಅದಕ್ಕೂ ಮುನ್ನ ಅವರು ವಿವಿಧ ಪಾರ್ಟಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

  Sonu Nigam won't return from Dubai until things get normal | Soni nigam | Modi | Dubai

  ಕನಿಕಾ ಅವರ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಅವರ ಮಗ, ಸಂಸದ ದುಷ್ಯಂತ್ ಕೂಡ ಭಾಗವಹಿಸಿದ್ದರು. ಬಳಿಕ ದುಷ್ಯಂತ್ ರಾಷ್ಟ್ರಪತಿ ಅವರನ್ನೂ ಭೇಟಿ ಮಾಡಿದ್ದರು. ಹೀಗೆ ಈ ಸರಪಳಿ ತೀವ್ರ ಆತಂಕ ಮೂಡಿಸಿತ್ತು. ಅದೃಷ್ಟವಶಾತ್ ಇವರಲ್ಲಿ ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ.

  ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್ನೀವಿಲ್ಲಿ ಪೇಷೆಂಟ್ ಅಷ್ಟೇ, ಸ್ಟಾರ್ ಥರ ವರ್ತಿಸಬೇಡಿ: ಗಾಯಕಿಗೆ ವೈದ್ಯರಿಂದ ಕ್ಲಾಸ್

  266 ಮಂದಿ ಪತ್ತೆ

  266 ಮಂದಿ ಪತ್ತೆ

  ಈಗ ಕನಿಕಾ ಸಂಪರ್ಕಕ್ಕೆ ಬಂದಿರಬಹುದಾದ ಜನರನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿದ್ದು, ಇದುವರೆಗೂ ಕನಿಷ್ಠ 266 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಅವರಲ್ಲಿ 60ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿದೆ ಎಂದು ಉತ್ತರ ಪ್ರದೇಶ ಆರೋಗ್ಯ ಇಲಾಖೆ ತಿಳಿಸಿದೆ.

  ಮತ್ತಷ್ಟು ಮಾದರಿ ಸಂಗ್ರಹ

  ಮತ್ತಷ್ಟು ಮಾದರಿ ಸಂಗ್ರಹ

  ಕನಿಕಾ ಅವರು ಭಾಗವಹಿಸಿದ್ದ ಪಾರ್ಟಿಗಳಲ್ಲಿ ಹಾಜರಿದ್ದವರು ಹಾಗೂ ಅವರು ಓಡಾಡಿದ ಸ್ಥಳಗಳಲ್ಲಿ ಸಂಪರ್ಕಕ್ಕೆ ಬಂದವರಲ್ಲಿ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಂಡುಬಂದರೆ ಇನ್ನಷ್ಟು ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  ಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲುಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲು

  ರಾಜಕಾರಣಿಗಳ ತಪಾಸಣೆ

  ರಾಜಕಾರಣಿಗಳ ತಪಾಸಣೆ

  ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ-ಸಂಸದ ದುಷ್ಯಂತ್ ಸಿಂಗ್, ಉತ್ತರ ಪ್ರದೇಶದ ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೈ ಪ್ರತಾಪ್ ಸಿಂಗ್, ಮಾಜಿ ಕೇಂದ್ರ ಸಚಿವ ಜತಿನ್ ಪ್ರಸಾದ್ ಹಾಗೂ ಅವರ ಪತ್ನಿ ನೇಹಾ ಅವರನ್ನು ಕೂಡ ತಪಾಸಣೆಗೆ ಒಳಪಡಿಸಲಾಗಿದೆ.

  ಒಂದೇ ದಿನದಲ್ಲಿ 106 ಮಂದಿ ಪತ್ತೆ

  ಒಂದೇ ದಿನದಲ್ಲಿ 106 ಮಂದಿ ಪತ್ತೆ

  ಕಳೆದ 24 ಗಂಟೆಯಲ್ಲಿ ಭಾರತದಾದ್ಯಂತ 106 ಮಂದಿ ಸೇರಿದಂತೆ 266 ಮಂದಿಯನ್ನು ಪತ್ತೆಹಚ್ಚಿ ಅವರನ್ನು ಸಂಪರ್ಕಿಸಲಾಗಿದೆ. ಇವರಲ್ಲಿ ಕನಿಕಾ ಕಪೂರ್ ಸಂಪರ್ಕಕ್ಕೆ ಬಂದಿದ್ದ ಕೆಲವು ಪ್ರಮುಖ ರಾಜಕಾರಣಿಗಳು ಸೇರಿದ್ದಾರೆ. ಈ ಜನರನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿತ್ತು. ಅದೃಷ್ಟವಶಾತ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಜನರೆಲ್ಲರೂ ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  English summary
  Over 266 contacts of Kanika Kapoor traced by UP Health Department, all samples tested negative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X