For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಶಾಸಕನ ವಿರುದ್ಧ ಹರಿಹಾಯ್ದ ನಟಿ ಕೃತಿ ಸೆನನ್ ಮತ್ತು ಇತರ ನಟರು

  |

  ಬಾಲಿವುಡ್ ಖ್ಯಾತ ಮಂದಿ ಆಡಳಿತದಲ್ಲಿರುವವರನ್ನು ಟೀಕಿಸುವ ಗೋಜಿಗೆ ಹೋಗುವುದು ಬಹಳ ಕಡಿಮೆ. ಬಿಜೆಪಿ ಅಧಿಕಾರದಲ್ಲಿರುವ ಈ ಸಮಯದಲ್ಲಂತೂ ಬಹಳಷ್ಟು ನಟ-ನಟಿಯರು ರಾಜಕೀಯ ವಿಮರ್ಶೆಯಿಂದ ದೂರವೇ ಉಳಿದಿದ್ದಾರೆ.

  ಆದರೆ ಕೆಲವು ನಟಿಯರು ಮಾತ್ರ ಇದಕ್ಕೆ ಭಿನ್ನವಾಗಿ, ಸರ್ಕಾರವಾಗಲಿ, ಶಾಸಕ, ಸಂಸದ, ಮಂತ್ರಿ ಯಾರೇ ಆಗಿರಲಿ ತಮ್ಮ ಅಭಿಪ್ರಾಯವನ್ನು ನಿರ್ಭೀಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಮುಖರು ಸ್ವರಾ ಭಾಸ್ಕರ್, ನಿರ್ದೇಶಕ ಅನುರಾಗ್ ಕಶ್ಯಪ್ ಇನ್ನೂ ಕೆಲವರು. ಇದೇ ಸಾಲಿಗೆ ಸೇರುವವರ ನಟಿ ಕೃತಿ ಸೆನನ್.

  ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ

  ದೇಶದಾದ್ಯಂತ ಸುದ್ದಿಯಾಗಿರುವ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಬಿಜೆಪಿ ಶಾಸಕನೊಬ್ಬ ಆಡಿರುವ ಮತಿಹೀನ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ ನಟಿ ಕೃತಿಸೆನನ್.

  'ಅತ್ಯಾಚಾರ ತಡೆಯಲು ಸರ್ಕಾರದಿಂದ ಆಗದು, ಸಂಸ್ಕಾರದಿಂದ ಆಗುತ್ತದೆ'

  'ಅತ್ಯಾಚಾರ ತಡೆಯಲು ಸರ್ಕಾರದಿಂದ ಆಗದು, ಸಂಸ್ಕಾರದಿಂದ ಆಗುತ್ತದೆ'

  ಬಿಜೆಪಿ ಶಾಸಕ ಸುರೇಂದರ್ ಸಿಂಗ್, ಹತ್ರಾಸ್ ಅತ್ಯಾಚಾರದ ಕುರಿತಾಗಿ ಮಾಧ್ಯಮಗಳ ಬಳಿ ಮಾತನಾಡಿ, 'ಅತ್ಯಾಚಾರ ವು ಆಡಳಿತದಿಂದ ಅಥವಾ ಕತ್ತಿಯಿಂದ ನಿಲ್ಲಿಸಲು ಸಾಧ್ಯವಿಲ್ಲ, ಅತ್ಯಾಚಾರ ನಿಲ್ಲಿಸಲು ಸಂಸ್ಕಾರದಿಂದ ಮಾತ್ರದಿಂದ ಸಾಧ್ಯ' ಎಂದು ಹೇಳಿದ್ದಾರೆ ಸುರೇಂದರ್.

  ಹೆಣ್ಣು ಮಕ್ಕಳಿಗೆ ಪೋಷಕರು ಸಂಸ್ಕಾರ ಕೊಡಬೇಕು: ಶಾಸಕ

  ಹೆಣ್ಣು ಮಕ್ಕಳಿಗೆ ಪೋಷಕರು ಸಂಸ್ಕಾರ ಕೊಡಬೇಕು: ಶಾಸಕ

  ಮುಂದುವರೆದು, 'ತಂದೆ ತಾಯಿಗಳು ತಮ್ಮ ಯುವ ಹೆಣ್ಣುಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು, ಹೇಗೆ ನಡೆಯಬೇಕು, ಹೇಗೆ ಇರಬೇಕು, ಹೇಗೆ ವ್ಯವಹರಿಸಬೇಕು, ಅತ್ಯಾಚಾರಕ್ಕೆ ಒಳಗಾಗದಂತಹಾ ಸಂಸ್ಕಾರ ನೀಡಬೇಕು, ಅದರಿಂದ ಮಾತ್ರ ಅತ್ಯಾಚಾರಗಳು ನಿಲ್ಲುತ್ತವೆ' ಎಂದಿದ್ದಾರೆ.

  ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ

  ಗಂಡು ಮಕ್ಕಳಿಗೆ ಸಂಸ್ಕಾರ ಕೊಡಿ: ಕೃತಿ ಸೆನನ್

  ಗಂಡು ಮಕ್ಕಳಿಗೆ ಸಂಸ್ಕಾರ ಕೊಡಿ: ಕೃತಿ ಸೆನನ್

  ಇದನ್ನು ತೀವ್ರವಾಗಿ ವಿರೋಧಿಸಿರುವ ಕೃತಿ ಸೆನನ್, 'ಈ ವ್ಯಕ್ತಿಗೆ ತಾನು ಏನು ಮಾತನಾಡುತ್ತಿದ್ದೇನೆಂಬ ಅರಿವಿದೆಯಾ, ತನ್ನದೇ ಮಾತನ್ನು ಪುನಃ ಈತ ಕೇಳಿಸಿಕೊಳ್ಳಬಲ್ಲನೇ? ಈ ರೀತಿಯ ಯೋಚನೆಗಳೇ ಬದಲಾಗಬೇಕಿರುವುದು, ಗಂಡು ಮಕ್ಕಳಿಗೆ ಯಾಕೆ ಇಂಥಹವರು ಸಂಸ್ಕಾರ ಕೊಡುವುದಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ.

  ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada
  ಹಲವು ಬಾಲಿವುಡ್ ನಟ-ನಟಿಯರಿಂದ ವಿರೋಧ

  ಹಲವು ಬಾಲಿವುಡ್ ನಟ-ನಟಿಯರಿಂದ ವಿರೋಧ

  ಶಾಸಕ ಸುರೇಂದರ್ ಹೇಳಿಕೆಗೆ ಇನ್ನೂ ಕೆಲವು ಬಾಲಿವುಡ್ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದು, 'ಅತ್ಯಾಚಾರ ಮಾಡಬಾರದು ಎಂಬ ಸಂಸ್ಕಾರವನ್ನು ಗಂಡು ಮಕ್ಕಳಿಗೆ ಕೊಡಿ' ಎಂದು ಹೇಳಿದ್ದಾರೆ. ಮತ್ತೊಬ್ಬ ನಟ, 'ಇಂಥಹಾ ಬುದ್ಧಿಹೀನರನ್ನು ಏಕೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ.

  English summary
  Actress Kriti Sanon and some other Bollywood actors tweet against BJP MLA Surendra Singh's statement about giving sanskar to daughters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X