For Quick Alerts
  ALLOW NOTIFICATIONS  
  For Daily Alerts

  ವಿಜಯ್ ನೀನು 'ಕೊಂಡ' ಅಲ್ಲ 'ಅನಕೊಂಡ': 'ಲೈಗರ್' ಬಾಲ ಮುದುರಿಕೊಂಡಿದ್ದೇ ನಿನ್ನ‌ ಹುಚ್ಚಾಟದಿಂದ..!

  |

  ವಿಜಯ್ ದೇವಕೊಂಡ ಅದೃಷ್ಟ ಯಾಕೋ ಸರಿಯಿಲ್ಲ. ಟಾಲಿವುಡ್‌ ಬಿಟ್ಟು ಬಾಲಿವುಡ್‌ಗೆ ಹಾರಿದ್ರೂ ಲಕ್ ಮಾತ್ರ ಬದಲಾಗಿಲ್ಲ. ಪುರಿ ಜಗನ್ನಾಥ್ ಜೊತೆಯಾದ ಮೇಲೆ ಟಾಲಿವುಡ್ ರೌಡಿ ಕರಿಯರ್‌ಗೆ ಬಿಗ್ ಬೂಸ್ಟ್ ಸಿಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಅದೂ ಸುಳ್ಳಾಯ್ತು. ಸಿನಿಮಾ ಬಿಡುಗಡೆಯಾದ ದಿನವೇ 'ಲೈಗರ್' ಪಲ್ಟಿ ಹೊಡೆದಿದೆ.

  'ಲೈಗರ್' ಬಾಯ್‌ಕಾಟ್ ಅಭಿಮಾನ, ಜಾಳು ಕಥೆ, ಕೆಟ್ಟ ಸ್ಕ್ರೀನ್‌ ಪ್ಲೇ ಸಿನಿಮಾ ಸೋಲಿಗೆ ಕಾರಣ ಅನ್ನೋದನ್ನು ವಿಮರ್ಶಕರು ಹೇಳುತ್ತಿದ್ದಾರೆ. ಈ ಮಧ್ಯೆ ಮುಂಬೈ ಚಿತ್ರಮಂದಿರದ ಮಾಲೀಕರೊಬ್ಬರು ವಿಜಯ್ ದೇವರಕೊಂಡ ವಿರುದ್ಧ ತಿರುಗಿಬಿದ್ದಿದ್ದಾರೆ. ವಿಜಯ್ ದೇವರಕೊಂಡ ವರ್ತನೆ ಇವರ ಸಿಟ್ಟಿಗೆ ಕಾರಣ ಅನ್ನೋದು ವಿಶೇಷ.

  'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!

  'ಲೈಗರ್' ಸಿನಿಮಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಾಯ್‌ಕಾಟ್ ಅಭಿಯಾನ ಶುರುವಾಗಿತ್ತು. ಈ ಬಗ್ಗೆ ಸಿನಿಮಾ ಪ್ರಚಾರದ ವೇಳೆ ವಿಜಯ್‌ಗೆ ಪ್ರಶ್ನೆ ಕೂಡ ಮಾಡಲಾಗಿತ್ತು. ಆ ವೇಳೆ ವಿಜಯ್ ದೇವರಕೊಂಡು ನೀಡಿದ ಉತ್ತರವೇ ಥಿಯೇಟರ್ ಮಾಲೀಕರ ಆಕ್ರೋಶಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಅಷ್ಟಕ್ಕೂ ವಿಜಯ್ ದೇವರಕೊಂಡ ಹೇಳಿದ್ದಿದ್ದೇನು? ಅದಕ್ಕೆ ಥಿಯೇಟರ್‌ ಓನರ್ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ .

  ವಿಜಯ್ ದೇವರಕೊಂಡ ವಿರುದ್ಧ ಕಿಡಿ

  ವಿಜಯ್ ದೇವರಕೊಂಡ ವಿರುದ್ಧ ಕಿಡಿ

  ವಿಜಯ್ ದೇವರಕೊಂಡ ವಿರುದ್ಧ ಮುಂಬೈ ಚಿತ್ರಮಂದಿರದ ಮಾಲೀಕರೊಬ್ಬರು ಕಿಡಿಕಾರಿದ್ದಾರೆ. ಮುಂಬೈನ ಗೈಟಿ ಗ್ಯಾಲಕ್ಷಿ ಹಾಗೂ ಮರಾಠ ಮಂದಿರ್ ಚಿತ್ರಮಂದಿರದ ಮಾಲೀಕ ಮನೋಜ್ ದೇಸಾಯಿ ವಿಜಯ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಿಜಯ್ ದೇವರಕೊಂಡ ಅಹಂಕಾರವೇ ಈ ಸೋಲಿಗೆ ಕಾರಣವೆಂದು ಟೀಕಿಸಿದ್ದಾರೆ. ನಿನ್ನೆ 'ಲೈಗರ್' ಸಿನಿಮಾ ಬಿಡುಗಡೆಯಾಗುತ್ತಿದ್ಧಂತೆ ಮನೋಜ್ ದೇಸಾಯಿ ಟಾಲಿವುಡ್‌ ರೌಡಿ ವಿಜಯ್ ದೇವರಕೊಂಡನನ್ನು ಎದುರ ಹಾಕೊಂಡಿದ್ದಾರೆ.

  ವಿಜಯ್ 'ದೇವರಕೊಂಡ' ಅಲ್ಲ 'ಅನಕೊಂಡ'

  ವಿಜಯ್ 'ದೇವರಕೊಂಡ' ಅಲ್ಲ 'ಅನಕೊಂಡ'

  ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಗೂ ಮುನ್ನ ಬಾಯ್‌ಕಾಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. " ಬಾಯ್‌ಕಾಟ್ ಮಾಡೋರಿಗೆ ಮಾಡೋಕೆ ಬಿಡಿ. ನಾವು ಸಿನಿಮಾ ಮಾಡುತ್ತೇವೆ. ಯಾರಿಗೆ ನೋಡಬೇಕು ಅನಿಸುತ್ತೆ ಅವರು ನೋಡುತ್ತಾರೆ. ಯಾರಿಗೆ ನೋಡುವುದಕ್ಕೆ ಇಷ್ಟವಿಲ್ಲವೋ ಅವರು ಟಿವಿ ಇಲ್ಲವೇ ಫೋನ್‌ನಲ್ಲಿ ನೋಡುತ್ತಾರೆ. ಇದಕ್ಕೆ ನಾವೇನು ಮಾಡುವುದಕ್ಕೆ ಆಗೋದಿಲ್ಲ. ತುಂಬಾ ಗಮನ ಕೊಡುವುದಿಲ್ಲ." ಎಂದು ಹೇಳಿದ್ದರು. ವಿಜಯ್ ಹೀಗೆ ಅಹಂಕಾರದಿಂದ ಮಾಡಿದ್ದರಿಂದಲೇ ಹೀಗಾಗಿದೆ. "ವಿಜಯ್ ಕೊಂಡ ಕೊಂಡ ಅಲ್ಲ 'ಅನಕೊಂಡ' ಅಂತ ಸಿಟ್ಟಿನಲ್ಲಿ ಮನೋಜ್ ದೇಸಾಯಿ ಹೇಳಿದ್ದಾರೆ.

  ತಮಿಳು-ತೆಲುಗು ಸಿನಿಮಾ ಮಾಡಲಿ

  ತಮಿಳು-ತೆಲುಗು ಸಿನಿಮಾ ಮಾಡಲಿ

  ಮುಂಬೈ ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಇಲ್ಲಿ ನಿಲ್ಲಿಸಿಲ್ಲ."ಅಹಂಕಾರವಿರೋ ವಿಜಯ್ ದೇವರಕೊಂಡ ಮತ್ತೆ ವಾಪಸ್ ತೆಲುಗು ಹಾಗೂ ತಮಿಳು ಸಿನಿಮಾಗಳನ್ನು ಮಾಡಲಿ. ನಮ್ಮ ಸಿನಿಮಾವನ್ನು ಬಾಯ್‌ಕಾಟ್ ಮಾಡಲಿ ಅಂತ ನೀವ್ಯಾಕೆ ಹೇಳುತ್ತಿದ್ದೀರಾ? ಓಟಿಟಿಯಲ್ಲೂ ಜನರು ಸಿನಿಮಾವನ್ನು ನೋಡುವುದಿಲ್ಲ. ನಿಮ್ಮ ಈ ವರ್ತನೆ ಅಡ್ವಾನ್ಸ್ ಬುಕಿಂಗ್ ಮೇಲೆ ಪರಿಣಾಮ ಬೀರುತ್ತೆ." ಎಂದು ಮನೋಜ್ ದೇಸಾಯಿ ಹೇಳಿದ್ದಾರೆ. ಇದೇ ಹೇಳಿಕೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  'ಲೈಗರ್' 3 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

  'ಲೈಗರ್' 3 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್

  ವಿಜಯ್ ದೇವರಕೊಂಡ ಅಭಿನಯದ ಸಿನಿಮಾ 'ಲೈಗರ್' ಭಾರತದಾದ್ಯಂತ ಸುಮಾರು ಮೂರು ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಆದರೆ, ಮೊದಲ ದಿನವೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಈ ಸಿನಿಮಾ ಸೋತಿದೆ. ಸಿನಿಮಾದ ಕಥೆಯೇ ಪ್ರೇಕ್ಷಕರಿಗೆ ಹಿಡಿಸಿಲ್ಲ. ಈ ಮಧ್ಯೆ ಬಾಕ್ಸಾಫೀಸ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲುವ ಮುಂದುವರೆದಿದೆ. ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದರೂ, ಎರಡನೇ ದಿನ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದು ಸದ್ಯಕ್ಕಂತೂ ಕುತೂಹಲ.

  English summary
  Mumbai Theatre Owner Told Vijay Deverakonda is 'Anaconda' On His Of Boycott, Know More.
  Friday, August 26, 2022, 15:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X