For Quick Alerts
  ALLOW NOTIFICATIONS  
  For Daily Alerts

  ರಜನಿ ಮುಂದಿನ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ಮತ್ತು ಸ್ಟಾರ್ ನಟಿ.!

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. 'ಪೇಟಾ' ಸಕ್ಸಸ್ ನಂತರ ತಲೈವಾ ಮುಂದಿನ ಸಿನಿಮಾಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.

  ಹೌದು, ರಜನಿಯ ಮುಂದಿನ ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ಸ್ಟಾರ್ ನಿರ್ದೇಶಕ ಎ ಆರ್ ಮುರುಗದಾಸ್ ಆಕ್ಷನ್ ಕಟ್ ಹೇಳ್ತಿದ್ದಾರಂತೆ.

  Petta review: ಅಭಿಮಾನಿಗಳು ನಿರೀಕ್ಷೆ ಮಾಡಿದ್ದು ಇದನ್ನೇ

  ಈ ಹಿಂದೆಯೇ ರಜನಿ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಮುರುಗದಾಸ್ ಹೇಳಿಕೊಂಡಿದ್ದರು. ರಾಜಕೀಯ ಕುರಿತ ಸಿನಿಮಾ, ಪಕ್ಕಾ ಮಾಸ್ ಎಂಟರ್ ಟೈನರ್ ಆಗಿ ಮೂಡಿಬರಲಿದೆ ಎಂದು. ಬಹುಶಃ ಈ ಪ್ರಾಜೆಕ್ಟ್ ಗೆ ಈಗ ಗ್ರೀನ್ ಸಿಗ್ನಲ್ ಸಿಕ್ಕಿರಬಹುದು.

  ಇನ್ನು ಈ ಚಿತ್ರದಲ್ಲಿ ಯುವನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮತ್ತೊಂದು ಸುದ್ದಿ ತಮಿಳು ಮಾಯಾಲೋಕದಲ್ಲಿ ಹರಿದಾಡುತ್ತಿದೆ.

  ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿದ ಸೂಪರ್ ಸ್ಟಾರ್.!

  ಈ ಹಿಂದೆ ಎಆರ್ ಮುರುಗದಾಸ್ ನಿರ್ದೇಶನ ಮಾಡಿದ್ದ ಸರ್ಕಾರ್ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದರು. ಇದೀಗ, ತಮ್ಮ ಮುಂದಿನ ಚಿತ್ರಕ್ಕೂ ಕೀರ್ತಿ ಹೀರೋಯಿನ್ ಆಗಲಿದ್ದಾರೆ ಎನ್ನಲಾಗಿದೆ. ಆದ್ರೆ, ಇದ್ಯಾವುದು ಸದ್ಯಕ್ಕೆ ಅಧಿಕೃತವಾಗಿ ಪ್ರಕಟವಾಗಿಲ್ಲ.

  English summary
  Superstar rajinikanth is gearing up for his next film with filmmaker AR Murugadoss, whose previous film was Sarkar with Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X