»   » ಸುದೀಪ್ ಕಾಲ್ಗುಣದಿಂದ 'ರಾಜು ಕನ್ನಡ ಮೀಡಿಯಂ'ಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ.!

ಸುದೀಪ್ ಕಾಲ್ಗುಣದಿಂದ 'ರಾಜು ಕನ್ನಡ ಮೀಡಿಯಂ'ಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ.!

Posted By:
Subscribe to Filmibeat Kannada
Sudeep in Raju Kannada Medium Movie increasing demand for distribution rights

'ರಾಜು ಕನ್ನಡ ಮೀಡಿಯಂ' ಸದ್ಯ ಕನ್ನಡದಲ್ಲಿ ಕುತೂಹಲ ಮೂಡಿಸಿರುವ ಸಿನಿಮಾ. ಒಂದು ಹಂತದಲ್ಲಿ ಹೊಸಬರ ಎಂದು ಗುರುತಿಸಿಕೊಂಡಿದ್ದ ಈ ಸಿನಿಮಾ ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಚಿತ್ರ.

ಅದಕ್ಕೆ ಕಾರಣ ಕಿಚ್ಚ ಸುದೀಪ್. 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕ ಹೇಳುವಾಗೆ, ಸುದೀಪ್ ಅವರದ್ದು ಹೀಗೆ ಬಂದು ಹಾಗೆ ಹೋಗುವ ಪಾತ್ರವಲ್ಲ, ಇದು ಇಡೀ ಚಿತ್ರಕ್ಕೆ ಬೆಂಬಲವಾಗಿ ನಿಲ್ಲುವ ಪಾತ್ರ ಎಂದಿದ್ದರು.

ಇಷ್ಟು ಸಾಕು ಅಲ್ವಾ. 'ರಾಜು ಕನ್ನಡ ಮೀಡಿಯಂ' ಚಿತ್ರವನ್ನ ಸುದೀಪ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋನೇ ನೋಡೋದಕ್ಕೆ. ಹೀಗೆ, ಸುದೀಪ್ ಅವರ ಎಂಟ್ರಿಯಿಂದ ದೊಡ್ಡ ಸುದ್ದಿ ಮಾಡುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರಕ್ಕೆ ಈಗ ವಿದೇಶದಿಂದ ಬೇಡಿಕೆ ಬಂದಿದೆ. ಅದು ಏನು ಅಂತ ಮುಂದೆ ಓದಿ......

ಸುದೀಪ್ ಟೀಸರ್ ನಿಂದ ಹೆಚ್ಚಿದ ಬೇಡಿಕೆ

ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಟೀಸರ್ ನಿಂದ 'ರಾಜು ಕನ್ನಡ ಮೀಡಿಯಂ' ಚಿತ್ರದ ಬೇಡಿಕೆ ಮತ್ತಷ್ಟು ಹೆಚ್ಚಿದೆ. ವಿದೇಶಗಳಿಂದ ಈ ಸಿನಿಮಾ ಕೊಂಡುಕೊಳ್ಳಲು ವಿತರಕರು ಮುಂದಾಗುತ್ತಿದ್ದಾರೆ.

ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಇಬ್ಬರ ದರ್ಬಾರ್ ಮತ್ತೆ ಶುರುವಾಯ್ತು!

ಕೆನಡಾದ ವಿತರಣೆ ಹಕ್ಕಿಗೆ ಬಾರಿ ಡಿಮ್ಯಾಂಡ್

'ರಾಜು ಕನ್ನಡ ಮೀಡಿಯಂ' ಚಿತ್ರದ ವಿತರಣೆ ಹಕ್ಕು ಪಡೆಯಲು ಕೆನಡಾ ದೇಶದಿಂದ ಬೇಡಿಕೆ ಬಂದಿದೆಯಂತೆ. ಕನ್ನಡ ಮೀಡಿಯಂನಲ್ಲಿ ಓದಿರುವ ಅನೇಕ ಕನ್ನಡಿಗರು ದೇಶ, ವಿದೇಶದಲ್ಲಿ ನೆಲೆಸಿದ್ದಾರೆ. ಬಹುತೇಕ ಟೆಕ್ಕಿಗಳು ಈ ಚಿತ್ರ ವಿದೇಶದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

8 ದಿನದಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ ಸುದೀಪ್ ಟೀಸರ್ ಯಾವುದು?

ದಸರಾ ಹಬ್ಬಕ್ಕೆ ತೆರೆ ಕಾಣಬಹುದು!

ಎಲ್ಲ ಅಂದುಕೊಂಡಂತೆ ಆದ್ರೆ, ದಸರಾ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. 'ಫಸ್ಟ್ Rank ರಾಜು' ಖ್ಯಾತಿಯ ಗುರುನಂದನ್ ಈ ಚತ್ರದಲ್ಲಿ ನಾಯಕ. 'ರಂಗಿತರಂಗ' ಖ್ಯಾತಿಯ ಆವಂತಿಕ ಶೆಟ್ಟಿ ನಾಯಕಿಯಾಗಿದ್ದು, ಆಶಿಕಾ ರಂಗನಾಥ್ ಹಾಗೂ ಆಂಜೇಲಿನ ಕೂಡ ಅಭಿನಯಿಸಿದ್ದಾರೆ.

'ಶ್ರೀಮಂತ ಸುದೀಪ'ನ ಸ್ಟೈಲಿಶ್ ಟೀಸರ್ ರಿಲೀಸ್

'ಆಗರ್ಭ ಶ್ರೀಮಂತ'ನ ಪಾತ್ರದಲ್ಲಿ ಸುದೀಪ್

'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಸುದೀಪ್ ಅವರು ಆಗರ್ಭ ಶ್ರೀಮಂತನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ದೊಡ್ಡ ನಿರೀಕ್ಷೆ ಹೆಚ್ಚಿಸಿದೆ.

English summary
Distribution Rights of Kannada Movie 'Kannada Medium Raju' is in demand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada