For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮನೆ ಮೇಲೆ ಕಲ್ಲು ತೂರಾಟ: ನಿಖಿಲ್ ಕುಮಾರ್ ಹೇಳಿದ್ದೇನು?

  |
  Lok Sabha Elections 2019 : ದರ್ಶನ್ ಮನೆ ಮೇಲೆ ಕಲ್ಲು ತೂರಿದ ಬಗ್ಗೆ ನಿಖಿಲ್ ಹೇಳಿದ ಸತ್ಯ ಏನು?

  ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ನಟ ದರ್ಶನ್ ಮತ್ತು ಯಶ್ ಟೊಂಕಕಟ್ಟಿ ನಿಂತಿದ್ದಾರೆ. ಚಿತ್ರೀಕರಣದ ನಡುವೆಯೂ ಸುಮಲತಾ ಪರ ಪ್ರಚಾರ ಮಾಡುತ್ತಿದಾರೆ ಈ ಇಬ್ಬರು ನಟರು.

  ಹೀಗಿರುವಾಗ ನಟ ದರ್ಶನ್ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಕಳೆದ ರಾತ್ರಿ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ನಿವಾಸ ಹಾಗೂ ಕಾರಿನ ಮೇಲೆ ಕಲ್ಲು ಎಸೆದು ಕಿಡಿಗೇಡಿಗಳು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

  ಸುಮಲತಾ ಪರ ಪ್ರಚಾರ ಮಾಡುತ್ತಿರುವ ಕಾರಣ ಹೀಗೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

  ದರ್ಶನ್ ಮನೆ ಮೇಲೆ ಕಲ್ಲು ತೂರಾಟ: 'ಚಾಲೆಂಜ್ ಆಗಿ ಸ್ವೀಕರಿಸ್ತಾರೆ' ಎಂದ ಸುಮಲತಾ

  ಮಂಡ್ಯದಲ್ಲಿ ಪ್ರಚಾರ ಮಾಡ್ತಿರುವ ನಿಖಿಲ್ 'ಇಂತಹ ಕೆಲಸವನ್ನು ನಾವ್ಯಾಕೆ ಮಾಡೋಣ, ನಮಗೆ ಎಲ್ಲಾ ಕಡೆಯೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ಮೇಲಯೂ ಆ ರೀತಿ ಪ್ರಯತ್ನ ಆಯ್ತು. ಹೀಗೆ ಮಾಡಬಾರದು' ಎಂದು ಹೇಳಿದ್ದಾರೆ.

  ಮಂಡ್ಯದಲ್ಲಿ ದುರ್ಯೋಧನ vs ಅಭಿಮನ್ಯು: ಮುನಿರತ್ನ 'ಕುರುಕ್ಷೇತ್ರ'ಕ್ಕೆ ಫುಲ್ ಟೆನ್ಷನ್.!

  ಮತ್ತೊಂದೆಡೆ ಮಂಡ್ಯ ಕ್ಷೇತ್ರ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರು ಮಾತನಾಡಿದ್ದು, 'ದರ್ಶನ್ ಅವರನ್ನ ಪ್ರಚಾರದಿಂದ ಹಿಂದೆ ಸರಿಸಲು ಸಾಧ್ಯವಿಲ್ಲ. ಈ ರೀತಿ ಹೆದರಿಸೋಕೆ ಸಾಧ್ಯವಿಲ್ಲ. ಇದರಿಂದ ಅಭಿಮಾನಿಗಳು ಪ್ರಚೋದನೆಗೆ ಒಳಗಾಗಬಾರದು. ದರ್ಶನ್ ಇದನ್ನ ಚಾಲೆಂಜ್ ಆಗಿ ಸ್ವೀಕರಿಸ್ತಾರೆ' ಎಂದಿದ್ದಾರೆ.

  ಇನ್ನು ದರ್ಶನ್ ಅವರ ಮನೆ ಮೇಲ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.

  English summary
  Mandya JDS candidate Nikhil kumaraswamy react about darshan house attack incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X