For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಸಿನಿಮಾ ಬಗ್ಗೆ ಕೊನೆಗೂ ಬಾಯ್‌ಬಿಟ್ಟ ರಾಜಮೌಳಿ: ಜೇಮ್ಸ್ ಬಾಂಡ್‌ ಶೈಲಿ ಸಿನಿಮಾ!

  |

  ಇತ್ತೀಚೆಗಷ್ಟೇ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಿದೆ. ಮಹೇಶ್ ಬಾಬು 28ನೇ ಸಿನಿಮಾ ಇದಾಗಿದ್ದು, ಫ್ಯಾನ್ಸ್ ಕಾತುರದಿಂದ ಎದುರು ನೋಡುತ್ತಿದ್ದಾರೆ. ಇತ್ತ ಮಹೇಶ್ ಬಾಬು 28ನೇ ಸಿನಿಮಾ ಲಾಂಚ್ ಆಗುತ್ತಿದ್ಧಂತೆ, ಅತ್ತ ರಾಜಮೌಳಿ ತನ್ನ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ.

  ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಅನೌನ್ಸ್ ಆದಲ್ಲಿಂದ ಸಾಕಷ್ಟು ಕುತೂಹಲ ಮೂಡಿಸಿದೆ. RRR ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಸೆಟ್ಟೇರುತ್ತೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಹಾಗಲಿಲ್ಲ. ಈ ಮಧ್ಯೆ ಮಹೇಶ್ ಬಾಬು ಇನ್ನೊಂದು ಸಿನಿಮಾ ಸೆಟ್ಟಿಗೆ ಕಾಲಿಟ್ಟಿದ್ದಾಗಿದೆ. ರಾಜಮೌಳಿ ಸಿನಿಮಾಗಾಗಿ ಆದಷ್ಟು ಬೇಗ 28ನೇ ಸಿನಿಮಾವನ್ನು ಮುಗಿಸುವ ತರಾತುರಿಯಲ್ಲಿದ್ದಾರೆ.

  ಮಹೇಶ್ ಬಾಬು 28ನೇ ಚಿತ್ರದ ಶೂಟಿಂಗ್ ಆರಂಭ; ವಿಶೇಷ ಟೀಸರ್ ಹಂಚಿಕೊಂಡ ಚಿತ್ರತಂಡ ಮಹೇಶ್ ಬಾಬು 28ನೇ ಚಿತ್ರದ ಶೂಟಿಂಗ್ ಆರಂಭ; ವಿಶೇಷ ಟೀಸರ್ ಹಂಚಿಕೊಂಡ ಚಿತ್ರತಂಡ

  ಇತ್ತೀಚೆಗೆ ರಾಜಮೌಳಿ ಟೊರೆಂಟೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುವ ಬಗ್ಗೆ ರಿವೀಲ್ ಮಾಡಿದ್ದಾರೆ. ರಾಜಮೌಳಿ ಕೊಟ್ಟ ಈ ಸ್ಟೇಟ್ಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಟೊರೆಂಟೊ ಚಿತ್ರೋತ್ಸವದಲ್ಲಿ ರಾಜಮೌಳಿ

  ಟೊರೆಂಟೊ ಚಿತ್ರೋತ್ಸವದಲ್ಲಿ ರಾಜಮೌಳಿ

  RRR ಸಿನಿಮಾದಲ್ಲಿ ವಿಶ್ವದ ಗಮನ ಸೆಳೆಯುತ್ತಿರುವ ರಾಜಮೌಳಿ ಸದ್ಯ ಕೆನಡಾದಲ್ಲಿದ್ದಾರೆ. ಅಲ್ಲಿ ನಡೆಯುತ್ತಿರುವ ಟೊರೊಂಟೊ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಚಲನ ಚಿತ್ರೋತ್ಸವಗಳಲ್ಲೊಂದು. ಇದೇ ಫಿಲ್ಮ್ ಫೇಸ್ಟಿವಲ್‌ನಲ್ಲಿ ಎಸ್ ಎಸ್ ರಾಜಮೌಳಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮುಂದಿನ ಸಿನಿಮಾ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ರಾಜಮೌಳಿ ಕೊಟ್ಟ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

  ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?

  ರಾಜಮೌಳಿ ಹೇಳಿದ್ದೇನು?

  ರಾಜಮೌಳಿ ಹೇಳಿದ್ದೇನು?

  ಟೊರೆಂಟೊ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಾಜಮೌಳಿ RRR ಸಿನಿಮಾ ಬಗ್ಗೆ ಆಸಕ್ತಿಕರ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆನೇ ಮಹೇಶ್ ಬಾಬು ಜೊತೆಗಿನ ಸಿನಿಮಾ ಬಗ್ಗೆನೂ ಮಾತಾಡಿದ್ದಾರೆ. " ನನ್ನ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಮಾಡುತ್ತಿದ್ದೇನೆ. ಇದು ವಿಶ್ವ ಸಂಚಾರ ಮಾಡುವ ಆಕ್ಷನ್ ಅಡ್ವೆಂಚರ್ ಸಿನಿಮಾ." ಎಂದು ಕೆನಡಾ ಹಾಗೂ ಭಾರತೀಯರ ಮುಂದೆ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ.

  ಇದು 'ಜೇಮ್ಸ್ ಬಾಂಡ್' ಸಿನಿಮಾ

  ಇದು 'ಜೇಮ್ಸ್ ಬಾಂಡ್' ಸಿನಿಮಾ

  RRR ಸಿನಿಮಾ ಮಾಡುವಾಗಲೂ ರಾಜಮೌಳಿ ಹಿಂಟ್ ಕೊಟ್ಟಿದ್ದರು. ಹಾಗೇ ಮಹೇಶ್ ಬಾಬು 29ನೇ ಸಿನಿಮಾ ಮಾಡುವಾಗಲೂ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಇದೊಂದು ಜೇಮ್ಸ್ ಬಾಂಡ್ ಸಿನಿಮಾ ಅಥವಾ ಇಂಡಿಯಾ ಜೋನ್ಸ್ ಸಿನಿಮಾ ಹಾಗೇ ಇರುತ್ತೆ. ಆದರೆ ಭಾರತದ ಸ್ಟೈಲ್‌ನಲ್ಲಿ ಸಿನಿಮಾವಿರುತ್ತೆ ಎಂದು ಮಹೇಶ್ ಬಾಬು ಸಿನಿಮಾ ಬಗ್ಗೆ ರಾಜಮೌಳಿ ಹೇಳಿದ್ದಾರೆ. ಈ ಕಾರಣಕ್ಕೆ ಮತ್ತಷ್ಟು ಕುತೂಹಲ ಹೆಚ್ಚಿದೆ.

  ಮುಂದಿನ ವರ್ಷ ಶೂಟಿಂಗ್: ಬಜೆಟ್ ಎಷ್ಟು?

  ಮುಂದಿನ ವರ್ಷ ಶೂಟಿಂಗ್: ಬಜೆಟ್ ಎಷ್ಟು?

  ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರುತ್ತಿದೆ. ರಾಜಮೌಳಿ ತಂದೆ ಕೆ ವಿ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಹೆಣೆದಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. 2023ರಲ್ಲಿ ಮಹೇಶ್ ಬಾಬು ಸಿನಿಮಾ ಸೆಟ್ಟೇರಲಿದೆ. ಮೂಲಗಳ ಪ್ರಕಾರ, ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

  English summary
  SS Rajamouli Reveals His Next Movie With Mahesh Babu Is Globetrotting Action Adventure, Know More.
  Tuesday, September 13, 2022, 16:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X