For Quick Alerts
  ALLOW NOTIFICATIONS  
  For Daily Alerts

  ಬದಲಾದ ದುನಿಯಾ ವಿಜಿ: ಹೊಸ ವರ್ಷಕ್ಕೆ 'ಹೊಸ ನಿರ್ಧಾರ' ಪ್ರಕಟ.!

  |
  ಬದಲಾದ ದುನಿಯಾ ವಿಜಿ: ಹೊಸ ವರ್ಷಕ್ಕೆ 'ಹೊಸ ನಿರ್ಧಾರ' ಪ್ರಕಟ.! | FILMIBEAT KANNADA

  ಕೌಟುಂಬಿಕ ಸಮಸ್ಯೆಯಿಂದ ಪದೇ ಪದೇ ಸುದ್ದಿಯಾಗುತ್ತಿರುವ ದುನಿಯಾ ವಿಜಯ್, ಕೆಲವು ದಿನಗಳಿಂದ ತಮ್ಮ ಸಿನಿಮಾಗಳ ಮೇಲೆ ಸಂಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಗಿಲ್ಲ. ಶೂಟಿಂಗ್ ನಡೆಯುತ್ತಿದ್ದ 'ಕುಸ್ತಿ' ಸೈಲೆಂಟ್ ಆಗಿತ್ತು. ವಿಜಿ ಕೂಡ ಖಾಸಗಿ ಲೈಫ್ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡು ಕೂರುವಂತಾಗಿತ್ತು.

  ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಮೇಲೆ ಹಲ್ಲೆ ಪ್ರಕರಣ ಹಾಗೂ ದುನಿಯಾ ವಿಜಿ ಪತ್ನಿ ನಾಗರತ್ನ ಮತ್ತು ಕೀರ್ತಿಗೌಡ ನಡುವೆ ಗಲಾಟೆ ವಿಜಿ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಂತೂ ಸುಳ್ಳಾಲ್ಲ.

  ಮಾರುತಿ ಗೌಡ ಮೇಲಿನ ಹಲ್ಲೆ ಬಗ್ಗೆ ದುನಿಯಾ ವಿಜಯ್ ಹೇಳಿದ ಕಥೆಯೇ ಬೇರೆ

  ಇದೀಗ, ಈ ಕಲಹಗಳಿಂದ ದುನಿಯಾ ವಿಜಯ್ ಹೊರಬಂದಿದ್ದಾರೆ. ತನ್ನ ಅಭಿಮಾನಿಗಳಿಗಾಗಿ ಬದಲಾಗುತ್ತಿದ್ದಾರೆ. ಇಷ್ಟು ದಿನ ನೋಡಿದ ದುನಿಯಾ ವಿಜಯ್ ಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲು ಬ್ಲ್ಯಾಕ್ ಕೋಬ್ರಾ ನಿರ್ಧರಿಸಿದ್ದಾರಂತೆ. ಅದೇನು ಅಂತ ಹೊಸ ವರ್ಷಕ್ಕೆ ಪ್ರಕಟ ಮಾಡಲಿದ್ದೇನೆ ಎಂದು ಸ್ವತಃ ದುನಿಯಾ ವಿಜಯ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ, ಏನದು? ಮುಂದೆ ಓದಿ....

  ಬದಲಾವಣೆ ಜಗದ ನಿಯಮ

  ಬದಲಾವಣೆ ಜಗದ ನಿಯಮ

  ''ಪ್ರತಿ ಸಲಾನೂ ಹೊಸವರ್ಷ ಬಂತು ಅಂದ್ರೆ ಇನ್ನೊಂದಷ್ಟು ಹೊಸ ತರಹ ಬದಲಾಗ್ಬೇಕು ಅನ್ಸುತ್ತೆ. 2019ರಲ್ಲಿ ಆ ತರಹ ನನ್ನಲ್ಲೂ ಒಂದು ಚೇಂಜ್ ತರೋಣ ಅಂತ ನಿರ್ಧಾರ ಮಾಡಿದ್ದೀನಿ. 'ಬದಲಾವಣೆ ಜಗದ ನಿಯಮ' ಎಂಬ ಮಾತಿದೆ. ಈ ನಿಮ್ ವಿಜಿ ದುನಿಯಾ ಕೂಡ ಅದಕ್ಕಿಂತ ಬೇರೇದೇನೂ ಅಲ್ಲ ಅಲ್ವ? ಈ ಚೇಂಜ್ ನಿಮಗೆ ಈ ಹಿಂದಿಗಿಂತಲೂ ಇಷ್ಟಾಗುತ್ತೆ ಅಂತ ನಂಬಿದ್ದೀನಿ''

  'ನಾನು ಹಲ್ಲೆ ಮಾಡಿಲ್ಲ, ಕಿಟ್ಟಿ ಮೇಲೆ ದ್ವೇಷ ಇಲ್ಲ' ಎಂದ ದುನಿಯಾ ವಿಜಯ್

  ಹೊಸ ವಿಜಿ ನಿಮ್ಮ ಮುಂದೆ

  ಹೊಸ ವಿಜಿ ನಿಮ್ಮ ಮುಂದೆ

  ''ಈ ನನ್ನ ಹೊಸ ಕನಸಿಗೆ ಜೊತೆ ಸೇರಿರೋರು ಡೈರೆಕ್ಟರ್ ರಾಘು ಶಿವಮೊಗ್ಗ. ನಿಜ, ಈ ಬದುಕು ಅನ್ನೋ ಕುಸ್ತಿಯಲ್ಲಿ ದಿನಾ ಹೊಸ ಪಟ್ಟು ಹಾಕ್ತಾ ಇದ್ರೇನೇ ಗೆಲ್ಲೋಕೆ ಸಾಧ್ಯ! ಹಾಗಾಗಿ ಒಂದ್ಕಡೆ 'ಕುಸ್ತಿ'ಯ ತಯಾರಿ ಅಖಾಡದ ಹೊರಗೆ ನಡೆದಿದೆ. ಅದೇ ಟೈಮಲ್ಲಿ ಅದೇ ರಾಘು ಜೊತೆ ಸೇರಿಕೊಂಡು ಹೊಸದೊಂದು ಪಾತ್ರದಲ್ಲಿ ನಿಮ್ಮೆದುರು ಬರ್ತಿದ್ದೇನೆ''

  ದುನಿಯಾ ವಿಜಿ 'ಕುಸ್ತಿ' ಚಿತ್ರಕ್ಕೆ ಸಿಕ್ಕಳು ನಾಯಕಿ

  ವಿಜಿ ಹೀಗೂ ಮಾಡ್ತಾರಾ?

  ವಿಜಿ ಹೀಗೂ ಮಾಡ್ತಾರಾ?

  ''ಈ ಬಾರಿ ನಾನು ಮಾಡ್ತಿರುವ ಪಾತ್ರ ನನ್ನ ಅಣ್ಣ ತಮ್ಮಂದಿರಂಥ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತೆ ಅಂತ ಗೊತ್ತು. ಆದ್ರೆ ಇಲ್ಲಿ ಇರೋರು ಅಭಿಮಾನಿಗಳು ಮಾತ್ರ ಅಲ್ಲ ಅಂತಾನೂ ನನಗೆ ಗೊತ್ತು. ವಿಜಯ್ ಕೂಡ ಈ ತರಹ ಪಾತ್ರ ಮಾಡೋದ? ಅಂತ ಪ್ರಶ್ನೆ ಮಾಡಿದ್ರೂ ವಿಶೇಷ ಏನಿಲ್ಲ. ಆದ್ರೆ ಅದೇ ನೋಡಿ ಒಬ್ಬ ಕಲಾವಿದನ ಅದೃಷ್ಟ.! ಒಟ್ಟಿನಲ್ಲಿ ಪರದೆ ಮೇಲೆ ಬರೋ ನನ್ನ ಪಾತ್ರಗಳು ನಿಮ್ಮ ಅಭಿಮಾನ ಉಳಿಸುತ್ತೆ, ಬೆಳೆಸುತ್ತೆ ಎನ್ನೋದರಲ್ಲಿ ಯಾವುದೇ ಸಂದೇಹ ಬೇಡ''

  ಹೊಸ ವರ್ಷಕ್ಕೆ ಘೋಷಿಸುತ್ತೇನೆ

  ಹೊಸ ವರ್ಷಕ್ಕೆ ಘೋಷಿಸುತ್ತೇನೆ

  ''ನನ್ನ ರೋಲ್ ಏನು ಅಂತ ತಿಳಿಯೋಕೆ ನಿಮಗೆಲ್ಲ ಅವಸರ ಇದೆ ಅಂತ ನನಗೂ ಗೊತ್ತು. ಆದ್ರೆ ಈ‌ ಎಲ್ಲ‌ ಸಂಗತಿಗಳನ್ನು ನಾನು‌ ಹೊಸ ವರ್ಷದ ಮೊದಲ ‌ದಿನ, ಅಂದರೆ ಜನವರಿ 1 ರಂದು ಬೆಳಿಗ್ಗೆ 9 ಗಂಟೆಗೆ ಹೇಳುವೆ. ಅದುವರೆಗೆ ನಿಮ್ಮ ಪ್ರೀತಿ, ಅಭಿಮಾನ ಬೆಂಬಲ ಎಲ್ಲವೂ ಹೀಗೇನೇ ಇರಲಿ ಎನ್ನೋದೇ ಈ ನಿಮ್ಮ ವಿಜಯ್ ಪ್ರಾರ್ಥನೆ'' ಎಂದು ತಿಳಿಸಿದ್ದಾರೆ.

  ವಿಡಿಯೋ: ಅಬ್ಬಾ..! ದುನಿಯಾ ವಿಜಯ್ ಕಂದನ ಕಸರತ್ತು ನೋಡಿ

  'ಕುಸ್ತಿ' ಗೂ ಮೊದಲು ವಿಜಯ್ ಸಿನಿಮಾ?

  'ಕುಸ್ತಿ' ಗೂ ಮೊದಲು ವಿಜಯ್ ಸಿನಿಮಾ?

  ಸದ್ಯ, ರಘು ಶಿವಮೊಗ್ಗ ನಿರ್ದೇಶನ ಮಾಡ್ತಿರುವ 'ಕುಸ್ತಿ' ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಜಿ ಮಗ ಸಾಮ್ರಾಟ್ ಕೂಡ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೂ ಮುಂಚೆಯೇ ನಿರ್ದೇಶಕ ರಘು ಶಿವಮೊಗ್ಗ ಇನ್ನೊಂದು ಸಿನಿಮಾವನ್ನ ವಿಜಿಗಾಗಿ ಮಾಡಲು ಪ್ಲಾನ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಹೊಸ ರೀತಿ ಪಾತ್ರವನ್ನ ಪ್ಲೇ ಮಾಡ್ತಿದ್ದಾರಂತೆ ಕರಿಚಿರತೆ. ಅದನ್ನೇ ಹೊಸ ಹರ್ಷಕ್ಕೆ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  English summary
  Kannada actor duniya vijay will announce his new project with director raghu shivamogga on january 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X