For Quick Alerts
  ALLOW NOTIFICATIONS  
  For Daily Alerts

  ಸೆಮಿಫೈನಲ್ ಗೆ ಲಗ್ಗೆಯಿಟ್ಟ ಕರ್ನಾಟಕ ಬುಲ್ಡೋಜರ್ಸ್, ಎದುರಾಳಿ ಯಾರು?

  |

  ಸಿಸಿಎಲ್ ಟಿ 10 ಟೂರ್ನಿಯಲ್ಲಿ ಪ್ರದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡು ಮೈದಾನಕ್ಕಿಳಿದ ಸ್ಯಾಂಡಲ್ ವುಡ್ ತಂಡ ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

  ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಶುಭಾರಂಭ ಮಾಡಿದ್ದ ಕರ್ನಾಟಕ ಬುಲ್ಡೋಜರ್ಸ್, ಎರಡನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ನ ಬಗ್ಗು ಬಡಿದಿದೆ.

  CCL T10: ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್ CCL T10: ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್

  ಆದ್ರೆ, ಮೂರನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಸೋತು ನಿರಾಸೆ ಮೂಡಿಸಿತು. ಆದ್ರೂ ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದು ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡಿದೆ. ಹಾಗಿದ್ರೆ, ಸೆಮಿ ಫೈನಲ್ ನಲ್ಲಿ ಕರ್ನಾಟಕದ ಎದುರಾಳಿ ಯಾರು? ಮುಂದೆ ಓದಿ....

  ಬೋಝ್ ಪುರಿ ವಿರುದ್ಧ ಮೊದಲ ಸೆಮಿ

  ಬೋಝ್ ಪುರಿ ವಿರುದ್ಧ ಮೊದಲ ಸೆಮಿ

  ಭೋಜ್ ಪುರಿ ದಬಾಂಗ್ಸ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಸೆಮಿ ಫೈನಲ್ ಪಂದ್ಯ ಆಡಲಿದೆ. ಇಂದು ಸಂಜೆ 6 ಗಂಟೆಗೆ ಮ್ಯಾಚ್ ಶುರುವಾಗಲಿದೆ. ಈ ಪಂದ್ಯ ಗೆದ್ದರೇ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ.

  'ಕರ್ನಾಟಕ ಬುಲ್ಡೋಜರ್ಸ್' ತಂಡದ ಹೊಸ ಕ್ಯಾಪ್ಟನ್ ಗೆ ಶುಭ ಕೋರಿದ ಸುದೀಪ್'ಕರ್ನಾಟಕ ಬುಲ್ಡೋಜರ್ಸ್' ತಂಡದ ಹೊಸ ಕ್ಯಾಪ್ಟನ್ ಗೆ ಶುಭ ಕೋರಿದ ಸುದೀಪ್

  ಮುಂಬೈ ವರ್ಸಸ್ ಬೆಂಗಾಲ್

  ಮುಂಬೈ ವರ್ಸಸ್ ಬೆಂಗಾಲ್

  ಇನ್ನೊಂದು ಕಡೆ ಎರಡನೇ ಸೆಮಿಫೈನಲ್ ನಲ್ಲಿ ಮುಂಬೈ ಹೀರೋಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಹಣಾಹಣಿ ನಡೆಸಲಿದೆ. ಇವರಿಬ್ಬರಲ್ಲಿ ಗೆದ್ದವರು ಫೈನಲ್ ನಲ್ಲಿ ಕರ್ನಾಟಕ ಅಥವಾ ಭೋಜ್ ಪುರಿ ತಂಡವನ್ನ ಎದುರಿಸಲಿದ್ದಾರೆ.

  CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?CCL ಟೂರ್ನಿಗೆ ಮುಹೂರ್ತ ಫಿಕ್ಸ್: ಕರ್ನಾಟಕ ತಂಡದಲ್ಲಿ ಮಹತ್ವದ ಬದಲಾವಣೆ?

  ತೆಲುಗು ಮತ್ತು ಕರ್ನಾಟಕದ ತಂಡದ ಸ್ಕೋರ್

  ತೆಲುಗು ಮತ್ತು ಕರ್ನಾಟಕದ ತಂಡದ ಸ್ಕೋರ್

  ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ 10 ಓವರ್ ಗೆ 122 ರನ್ ಕಲೆ ಹಾಕಿತ್ತು. ಸೌರವ್ ಲೋಕಿ 30(14) ರಾಜೀವ್ 30(16) ಹಾಗೂ ಕೃಷ್ಣ ಅವರ 25(16) ರನ್ ನೆರವಿನಿಂದ ದೊಡ್ಡ ಟಾರ್ಗಟ್ ನೀಡಲಾಯಿತು. ಆದ್ರೆ, ಈ ಗುರಿ ಬೆನ್ನತ್ತಿದ ತೆಲುಗು ವಾರಿಯರ್ಸ್ 10 ಓವರ್ ಗೆ 68 ರನ್ ಗಳನ್ನ ಮಾತ್ರ ಕಲೆ ಹಾಕುವಲ್ಲಿ ಶಕ್ತರಾದರು. ಅಲ್ಲಿಗೆ ಕರ್ನಾಟಕ ತಂಡಕ್ಕೆ 54 ರನ್ ಗಳ ಗೆಲುವು ಸಿಕ್ಕಿತು.

  10 ಗಂಟೆಗೆ ಫೈನಲ್

  10 ಗಂಟೆಗೆ ಫೈನಲ್

  ಚಂಡೀಗಢದಲ್ಲಿ ಸಿಸಿಎಲ್ ಟೂರ್ನಿ ನಡೆಯುತ್ತಿದ್ದು, ಫೈನಲ್ ಪಂದ್ಯವೂ ಇಂದೇ ನಡೆಯಲಿದೆ. ಹೀಗಾಗಿ, ಸೆಮಿಫೈನಲ್ ಪಂದ್ಯಗಳನ್ನ ಯಾರು ಗೆಲ್ಲಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

  English summary
  Karnataka bulldozers team enters to semi final in celebrity cricket league t10.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X