Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!
ಕಳೆದೆರಡು ವಾರಗಳಿಂದ ನಟಿ ಪವಿತ್ರಾ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ ನಡುವಿನ ಪ್ರಕರಣ ಬೀದಿ ಬಂದಿದೆ. ತೆಲುಗು ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕಳೆದ ಕೆಲವು ದಿನಗಳಿಂದ ಇವರಿಬ್ಬರ ವಿರುದ್ಧ ಒಂದಲ್ಲಾ ಒಂದು ಆರೋಪ ಮಾಡುತ್ತಲೇ ಇದ್ದಾರೆ.
ನರೇಶ್ ಹಾಗೂ ಪ್ರವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಇದರೊಂದಿಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಅದೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಶಿವನ
ಭಕ್ತೆ
ಪವಿತ್ರಾ
ಲೋಕೇಶ್ಗಾಗಿ
ದೇವಸ್ಥಾನ
ಗಿಫ್ಟ್
ಕೊಟ್ಟು
ತಗಲಾಕೊಂಡ್ರಾ
ನರೇಶ್?
ಪವಿತ್ರಾ ಲೋಕೇಶ್ ನಮ್ಮ ಅತ್ತೆಯವರ ಡೈಮಂಡ್ ನೆಕ್ಲೆಸ್ ಅನ್ನು ಧರಿಸಿದ್ದರು. ಅದನ್ನು ಅವರಿಗೆ ಕೊಟ್ಟಿದ್ದು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರವಿತ್ರಾ ಲೋಕೇಶ್ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ರಹಸ್ಯ ಮದುವೆ, ಲಿವ್ ಇನ್ ರಿಲೇಷನ್‌ಶಿಪ್‌ನಿಂದ ಈಗ ಡೈಮಂಡ್ ನೆಕ್ಲೆಸ್‌ವರೆಗೂ ಬಂದು ನಿಂತಿದೆ.

ಡೈಮಂಡ್ ನೆಕ್ಲೆಸ್ ಪವಿತ್ರಾಗೆ ಸಿಕ್ಕಿದ್ದೇಗೆ?
ರಮ್ಯಾ ರಘುಪತಿ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿರುದ್ಧ ಆರೋಪ ಮಾಡುವುದನ್ನು ಮುಂದುವರೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಅತ್ತೆ ಧರಿಸುತ್ತಿದ್ದ ಡೈಮಂಡ್ ನಕ್ಲೆಸ್ ಬಗ್ಗೆ ಆರೋಪ ಮಾಡಿದ್ದಾರೆ. "ನಮ್ಮ ಅತ್ತೆ ಕೆಲವು ಆಭರಣಗಳನ್ನು ಧರಿಸುತ್ತಿದ್ದರು. ಅದನ್ನು ಅವರು ಯಾರಿಗೂ ಕೊಟ್ಟಿರಲಿಲ್ಲ. ಕೊಡುತ್ತಲೂ ಇರಲಿಲ್ಲ. ನಮ್ಮ ಅತ್ತೆ ಆ ಡೈಮಂಡ್ ನೆಕ್ಲೆಸ್ ಅನ್ನೂ ಯಾರಿಗೂ ಕೊಟ್ಟಿರಲಿಲ್ಲ. ಇದು ಪವಿತ್ರಾ ಲೋಕೇಶ್ ಅವರ ಕತ್ತಿನಲ್ಲಿ ಕಂಡಿದೆ. ಅದು ಹೇಗೆ ಅವರ ಕೈ ಸೇರಿತು ?" ಎಂದು ಆರೋಪ ಮಾಡಿದ್ದರು.

ಬರ್ತ್‌ಡೇಗೆ ಅತ್ತೆ ಧರಿಸುತ್ತಿದ್ದರು ಡೈಮಂಡ್ ನೆಕ್ಲೆಸ್
"ನಮ್ಮ ಅತ್ತೆ ವಿಜಯ ನಿರ್ಮಲಾ ಡೈಮಂಡ್ ನೆಕ್ಲೆಸ್ ಅನ್ನು ಅವರ ಹುಟ್ಟುಹಬ್ಬಕ್ಕೆ ಧರಿಸುತ್ತಿದ್ದರು. ನಾನು ಡೈಮಂಡ್ ನೆಕ್ಲೆಸ್ ಅನ್ನು ನೋಡಿದ್ದೇನೆ. ಪವಿತ್ರಾ ಲೋಕೇಶ್ ಧರಿಸಿದ ಆ ನೆಕ್ಲೆಸ್ ನಮ್ಮ ಅತ್ತೆ ಯವರದ್ದೇ ಎಂದು ಖಡಾಖಂಡಿತವಾಗಿ ಹೇಳಿದ್ದರು. ನನ್ನ ಅತ್ತೆ ಪ್ರತಿ ಹುಟ್ಟುಹಬ್ಬಕ್ಕೆ ಹೊಸ ಆಭರಣ ಖರೀದಿಸುತ್ತಿದ್ದರು. ಆಗ ಈ ಡೈಮಂಡ್ ನೆಕ್ಲೆಸ್ ಅನ್ನೂ ಖರೀದಿಸಿದ್ದರು." ರಮ್ಯಾ ರಘುಪತಿ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು.
ಸುಂಟರಗಾಳಿ-ಬಿರುಗಾಳಿ
ಎಲ್ಲಾ
ಬರುತ್ತೆ:
ಅವರ
ನಿರ್ಧಾರಕ್ಕೆ
ಬದ್ಧ
ಎಂದ
ಸುಚೇಂದ್ರ
ಪ್ರಸಾದ್

ಪವಿತ್ರಾಗೆ ಆ ನೆಕ್ಲೆಸ್ ಕೊಟ್ಟಿದ್ದು ನರೇಶ್
"ನಮ್ಮ ಅತ್ತೆ ವಿಜಯ ನಿರ್ಮಲಾ 2014ರಲ್ಲಿ ಈ ಡೈಮಂಡ್ ನೆಕ್ಲೆಸ್ ಅನ್ನು ಖರೀದಿ ಮಾಡಿದ್ದರು. ಆ ನೆಕ್ಲೆಸ್ ಅನ್ನು ಅವರು ಧರಿಸಿದ್ದನ್ನು ನಾನೂ ನೋಡಿದ್ದೇನೆ. ಈ ನೆಕ್ಲೆಸ್ ಅನ್ನು ನರೇಶ್ ಅವರೇ ಪವಿತ್ರಾ ಲೋಕೇಶ್ ಅವರಿಗೆ ಕೊಟ್ಟಿದ್ದಾರೆ." ಎಂದೂ ಕೂಡ ರಮ್ಯಾ ಆರೋಪ ಮಾಡಿದ್ದರು. ಇದಕ್ಕೆ ಪವಿತ್ರಾ ಲೋಕೇಶ್ ಕೂಡ ತಿರುಗೇಟು ನೀಡಿದ್ದಾರೆ.
ವಿವಾದಾತ್ಮಕ
ತೆಲುಗು
ನಟ
ನರೇಶ್
3ನೇ
ಪತ್ನಿ
ರಮ್ಯಾ
ಯಾರು?
Recommended Video


ರಮ್ಯಾಗೆ ತಿರುಗೇಟು ಕೊಟ್ಟ ಪವಿತ್ರಾ ಲೋಕೇಶ್
ರಮ್ಯಾ ರಘುಪತಿ ಆರೋಪಗಳಿಗೆ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. " ಒಂದೇ ತರಹದ ನೆಕ್ಲೆಸ್ ಇನ್ನೊಬ್ಬರ ಬಳಿ ಇರಲು ಸಾಧ್ಯವಿಲ್ಲವೇ? ನನಗೂ ಡೈಮಂಡ್ ನೆಕ್ಲೆಸ್ ಖರೀದಿ ಮಾಡುವ ಶಕ್ತಿಯಿದೆ. ರಮ್ಯಾ ರಘುಪತಿ ಮಾಡುವ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ." ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಆರೋಪ ಪ್ರತ್ಯಾರೋಪಗಳನ್ನು ರಮ್ಯಾ ರಘುಪತಿ ಮಾಡುತ್ತಿದ್ದಾರೆ. ಆದರೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಅವರ ಆರೋಪಗಳನ್ನು ತಳ್ಳಿ ಹಾಕುತ್ತಲೇ ಇದ್ದಾರೆ.