For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 'ಕಾಂತಾರ' ಯಾವ ಸ್ಥಾನದಲ್ಲಿದೆ ಗೊತ್ತಾ?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಎಲ್ಲರ ಊಹೆ ಮೀರಿ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. ಸ್ವತಃ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಸಂಸ್ಥೆ ಕೂಡ ಸಿನಿಮಾ ಈ ಮಟ್ಟಿಗೆ ಸದ್ದು ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ವಿಶ್ವದಾದ್ಯಂತ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಕಾಂತಾರ' ಸಿನಿಮಾ ದರ್ಬಾರ್ ನಡೆಸುತ್ತಿದೆ.

  ಸೆಪ್ಟೆಂಬರ್ 30ಕ್ಕೆ ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ ಸಿನಿಮಾ ತೆರೆಕಂಡಿತ್ತು. ಕನ್ನಡದಲ್ಲೇ ನಮ್ಮ ಮಣ್ಣಿ ಕಥೆಯನ್ನು ಪ್ರಪಂಚಕ್ಕೆ ಹೇಳಬೇಕು ಎಂದು ರಿಷಬ್ ಶೆಟ್ಟಿ ಅಂದುಕೊಂಡಿದ್ದರು. ಅದೇ ರೀತಿ ಮಾಡಿದ್ದರು. ಆದರೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಪರಭಾಷಿಕರ ಬೇಡಿಕೆ ನೋಡಿ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತು. ಅದರಲ್ಲೂ ಸಿಕ್ತು. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ತೆಲುಗು, ತಮಿಳು, ಮಲಯಾಳಂ ವರ್ಷನ್‌ಗಳು ಕೂಡ ಸಖತ್ ಸದ್ದು ಮಾಡುತ್ತಿವೆ. ಕೆಲವೆಡೆ ಇಂದಿಗೂ ಸಿನಿಮಾ ಹೌಸ್‌ಫುಲ್ ಆಗುತ್ತಿದೆ.

  ಭಾನುವಾರ ಇಂಡಿಯಾನೂ ಗೆಲ್ತು.. 'ಕಾಂತಾರ'ನೂ ಗೆಲ್ತು.. ಹೇಗೆ ಗೊತ್ತಾ?ಭಾನುವಾರ ಇಂಡಿಯಾನೂ ಗೆಲ್ತು.. 'ಕಾಂತಾರ'ನೂ ಗೆಲ್ತು.. ಹೇಗೆ ಗೊತ್ತಾ?

  ಕನ್ನಡದ ಮಟ್ಟಿಗೆ KGF - 2 ಚಿತ್ರದ ನಂತರದ ಸ್ಥಾನದಲ್ಲಿ 'ಕಾಂತಾರ' ಸಿನಿಮಾ ಇದೆ. ಶೀಘ್ರದಲ್ಲೇ ತೆಲುಗಿನ 'ಪುಷ್ಪ' ಚಿತ್ರದ ದಾಖಲೆಯನ್ನು ಅಳಿಸಿ ಹಾಕುವ ಸುಳಿವು ಸಿಗುತ್ತಿದೆ. ಬರೀ ಹಿಂದಿ ವರ್ಷನ್ 100 ಕೋಟಿ ರೂ. ಕಲೆಕ್ಷನ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲೂ 'ಕಾಂತಾರ' ಮೇಲಕ್ಕೇರುತ್ತಿದೆ.

  46ನೇ ಸ್ಥಾನದಲ್ಲಿ 'ಕಾಂತಾರ'

  46ನೇ ಸ್ಥಾನದಲ್ಲಿ 'ಕಾಂತಾರ'

  ಪ್ರಪಂಚದಾದ್ಯಂತ 'ಕಾಂತಾರ' ಸಿನಿಮಾ 305 ಕೋಟಿ ರೂ.ಗೂ ಅಧಿಕ ಕಲೆಕಷನ್ ಮಾಡಿ ಮುನ್ನುಗ್ಗುತ್ತಿದೆ. ಈಗಾಗಲೇ ಕೆಲ ಸಿನಿಮಾ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದರೆ ಮತ್ತೆ ಕೆಲವು 500 ಕೋಟಿ ಗಡಿ ದಾಟಿವೆ. ವಿಕಿಪೀಡಿಯ ಪ್ರಕಾರ ವಿಶ್ವದಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 'ಕಾಂತಾರ' 46ನೇ ಸ್ಥಾನದಲ್ಲಿದೆ. 2,200 ಕೋಟಿ ಗಳಿಕೆ ಕಂಡಿರುವ 'ದಂಗಲ್' ಮೊದಲ ಸ್ಥಾನದಲ್ಲಿದ್ದರೆ 1,810 ಕೋಟಿ ಬಾಚಿರುವ 'ಬಾಹುಬಲಿ- 2' ಎರಡನೇ ಸ್ಥಾನದಲ್ಲಿದೆ. 1250 ಕೋಟಿ ಕಲೆಕ್ಷನ್ ಮಾಡಿರುವ KGF - 2 ಮೂರನೇ ಸ್ಥಾನದಲ್ಲಿದೆ. ಐಎಂಡಿಬಿ ವೆಬ್‌ಸೈಟ್ ಪ್ರಕಾರ 335 ಕೋಟಿ ರೂ. ಗಳಿಕೆ ಕಂಡಿರುವ 'ಕಾಂತಾರ' 34ನೇ ಸ್ಥಾನದಲ್ಲಿದೆ.

  ರಜನಿ ಜೊತೆ ರಿಷಬ್ 1 ಗಂಟೆ ಸಂಭಾಷಣೆ: 'ಕಾಂತಾರ' ಬಿಟ್ಟು 'ಬೆಲ್‌ ಬಾಟಂ' ಕಥೆ ಬಂದಿದ್ಯಾಕೆ?ರಜನಿ ಜೊತೆ ರಿಷಬ್ 1 ಗಂಟೆ ಸಂಭಾಷಣೆ: 'ಕಾಂತಾರ' ಬಿಟ್ಟು 'ಬೆಲ್‌ ಬಾಟಂ' ಕಥೆ ಬಂದಿದ್ಯಾಕೆ?

  'ಕಾಂತಾರ' ಹೆಸರಿಗೆ ನಾನ್ KGF - 2 ದಾಖಲೆ

  'ಕಾಂತಾರ' ಹೆಸರಿಗೆ ನಾನ್ KGF - 2 ದಾಖಲೆ

  ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾಗಳ ಲಿಸ್ಟ್‌ನಲ್ಲಿ 'ಕಾಂತಾರ' ಎರಡನೇ ಸ್ಥಾನದಲ್ಲಿದೆ. KGF - 2 ನಂತರ ಕನ್ನಡದ ಮತ್ಯಾವುದೇ ಸಿನಿಮಾ 300 ಕೋಟಿ ಕಲೆಕ್ಷನ್ ಮಾಡಿರಲಿಲ್ಲ. ಆ ಸಾಧನೆಯನ್ನು ರಿಷಬ್ ಶೆಟ್ಟಿ ಸಿನಿಮಾ ಮಾಡಿದೆ. ಇವತ್ತಿಗೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸುಳಿವು ಸಿಗುತ್ತಿದೆ. ಇನ್ನು 'RRR', 'ಪೊನ್ನಿಯಿನ್ ಸೆಲ್ವನ್', 'ಬ್ರಹ್ಮಾಸ್ತ್ರ' ಸಿನಿಮಾಗಳ ಕಲೆಕ್ಷನ್ 400 ಕೋಟಿ ದಾಟಿದ್ದು, ಬಾಕ್ಸಾಫೀಸ್‌ನಲ್ಲಿ ಆ ಸಿನಿಮಾಗಳ ಗಳಿಕೆ ಮುಂದುವರೆದಿದೆ.

  20ನೇ ಸ್ಥಾನದಲ್ಲಿದ್ಯಾ 'ಕಾಂತಾರ'?

  20ನೇ ಸ್ಥಾನದಲ್ಲಿದ್ಯಾ 'ಕಾಂತಾರ'?

  'ಕಾಂತಾರ' ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಕೆಲವರು ಸಿನಿಮಾ 343 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ. ಆ ಲೆಕ್ಕದಲ್ಲಿ 'ಕಾಂತಾರ' ಅತಿಹೆಚ್ಚು ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದೆ ಎನ್ನುಲಾಗುತ್ತಿದೆ. ಆದರೆ ಬಹುತೇಕರು ಸಿನಿಮಾ 305 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡುತ್ತಿದ್ದಾರೆ.

  ಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರುಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರು

  ದೇಶಾದ್ಯಂತ 'ಕಾಂತಾರ' ವಿಜಯಯಾತ್ರೆ

  ದೇಶಾದ್ಯಂತ 'ಕಾಂತಾರ' ವಿಜಯಯಾತ್ರೆ

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ರಾಜಕುಮಾರ್, KGF - 1, KGF - 2 ನಂತರ 'ಕಾಂತಾರ' ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಸರಿಯಾಗಿ ಪ್ರಮೋಷನ್ ಮಾಡದೇ ಹಿಂದಿ ವರ್ಷನ್ ರಿಲೀಸ್ ಮಾಡಿದರೂ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಗೆಲ್ಲಿಸಿದ ಎಲ್ಲರಿಗೂ ಚಿತ್ರತಂಡ ಧನ್ಯವಾದ ತಿಳಿಸಿ ಬರುತ್ತಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ದೆಹಲಿಗೆ ತೆರಳಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಬಂದಿದ್ದರು. 'ಕಾಂತಾರ' ವಿಜಯಯಾತ್ರೆ ಮುಂದುವರೆದಿದೆ.

  English summary
  Rishab shetty Starrer Kantara becomes all time 46th highest Grosser of Indian cinema. the film has earned 305 Cr gross Worldwide. Know More.
  Monday, November 7, 2022, 23:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X