For Quick Alerts
  ALLOW NOTIFICATIONS  
  For Daily Alerts

  ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಈ 6 ಸೆಲೆಬ್ರಿಟಿಗಳು

  |

  ಫೆಬ್ರವರಿ 14 ಪ್ರೇಮಿಗಳ ದಿನ. ಈ ತಿಂಗಳಿನಲ್ಲಿ ಇದೊಂದು ದಿನ ತುಂಬಾ ಸ್ಪೆಷಲ್. ಆದ್ರೆ, ಈ ವರ್ಷ ಫೆಬ್ರವರಿ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಸಿಕ್ಕಾಪಟ್ಟೆ ವಿಶೇಷ. ಯಾಕಂದ್ರೆ, ಬ್ಯಾಕ್ ಟು ಬ್ಯಾಕ್ ಮದುವೆ ಕಾರ್ಯಕ್ರಮಗಳು ಈ ತಿಂಗಳಲ್ಲಿ ಫಿಕ್ಸ್ ಆಗಿದೆ.

  ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ತಮ್ಮ ಮಹಿಳಾ ಅಭಿಮಾನಿಗಳಿಗೆ ನಿರಾಸೆ ಮಾಡಿ ಮದ್ವೆ ಆಗ್ತಿದ್ದಾರೆ. ಮದ್ವೆ ದಿನಾಂಕ ಈಗಾಗಲೇ ಅಂತಿಮವಾಗಿದ್ದು, ಈ ಸೆಲೆಬ್ರಿಟಿಗಳ ಪೈಕಿ ಇವರ ಮದುವೆಯೇ ಮೊದಲು.

  ಇನ್ನು 'ಕುಲವಧು' ಧಾರಾವಾಹಿಯ ಅಮೃತಾ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ನೇಹಾ ಪಾಟೀಲ್, ನಿರ್ದೇಶಕಿ ಅನನ್ಯ ಕಾಸರವಳ್ಳಿ, ಸಿಹಿ ಕಹಿ ಚಂದ್ರು ದಂಪತಿಯ ಮಗಳು ಹಿತಾ ಚಂದ್ರ ಶೇಖರ್, ಹಾಗೆ ಸುಮ್ಮನೆ ಖ್ಯಾತಿ ನಟ ಕಿರಣ್ ಕೂಡ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಾಗಿದ್ರೆ, ಯಾರ ಮದುವೆ, ಯಾವಾಗ? ಮುಂದೆ ಓದಿ....

  ಅಗ್ನಿಸಾಕ್ಷಿ ವಿಜಯ್ ಸೂರ್ಯ

  ಅಗ್ನಿಸಾಕ್ಷಿ ವಿಜಯ್ ಸೂರ್ಯ

  ಪ್ರೇಮಿಗಳ ದಿನದಂದು (ಫೆಬ್ರವರಿ 14) ನಟ ವಿಜಯ್ ಸೂರ್ಯ ಮದುವೆ ನಡೆಯಲಿದೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ತಮ್ಮ ದೂರದ ಸಂಬಂಧಿ ಚೈತ್ರಾ ಅವರನ್ನ ವಿಜಯ್ ಸೂರ್ಯ ವಿವಾಹವಾಗಲಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಚೈತ್ರಾಗೆ ಇನ್ನೂ 23 ವರ್ಷ ವಯಸ್ಸು.

  ಹುಡುಗಿಯರಿಗೆ ವಿಜಯ್ ಸೂರ್ಯ ಹಾರ್ಟ್ ಬ್ರೇಕಿಂಗ್ ನ್ಯೂಸ್: ಸದ್ಯದಲ್ಲೇ ಡಿಂಪಲ್ ಹುಡುಗನ ಮದುವೆ.! ಹುಡುಗಿಯರಿಗೆ ವಿಜಯ್ ಸೂರ್ಯ ಹಾರ್ಟ್ ಬ್ರೇಕಿಂಗ್ ನ್ಯೂಸ್: ಸದ್ಯದಲ್ಲೇ ಡಿಂಪಲ್ ಹುಡುಗನ ಮದುವೆ.!

  ದಾಂಪತ್ಯ ಜೀವನಕ್ಕೆ ನೇಹಾ ಪಾಟೀಲ್

  ದಾಂಪತ್ಯ ಜೀವನಕ್ಕೆ ನೇಹಾ ಪಾಟೀಲ್

  'ಸ್ಮೈಲ್ ಪ್ಲೀಸ್' ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿರುವ ಕಿರುತೆರೆಯಲ್ಲೂ ಮಿಂಚಿರುವ ನಟಿ ನೇಹಾ ಪಾಟೀಲ್ ಗೆ ಮದುವೆ ಫಿಕ್ಸ್ ಆಗಿದೆ. ಇದೇ ತಿಂಗಳು... ಅಂದ್ರೆ ಫೆಬ್ರವರಿ 21 ಮತ್ತು 22 ರಂದು ನೇಹಾ ಪಾಟೀಲ್ ಕಲ್ಯಾಣ ನಡೆಯಲಿದೆ. ಬೆಂಗಳೂರಿನ ವಿಜಯನಗರ ಬಳಿ ಇರುವ ಶ್ರೀ ಬಸವೇಶ್ವರ ಸುಗುಣ ಕಲ್ಯಾಣ ಮಂಟಪದಲ್ಲಿ ನೇಹಾ ಪಾಟೀಲ್ ವಿವಾಹ ಮಹೋತ್ಸವ ನೆರವೇರಲಿದೆ. ಹುಬ್ಬಳ್ಳಿ ಮೂಲದ ನೇಹಾ ಪಾಟೀಲ್ ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರನ್ನು ವರಿಸಲಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್

  ಇದೇ ತಿಂಗಳು ನಡೆಯಲಿದೆ ನಟಿ ನೇಹಾ ಪಾಟೀಲ್ ವಿವಾಹ ಮಹೋತ್ಸವಇದೇ ತಿಂಗಳು ನಡೆಯಲಿದೆ ನಟಿ ನೇಹಾ ಪಾಟೀಲ್ ವಿವಾಹ ಮಹೋತ್ಸವ

  'ಕುಲವಧು' ಅಮೃತಾ ಮದುವೆ

  'ಕುಲವಧು' ಅಮೃತಾ ಮದುವೆ

  'ಕುಲವಧು' ಧಾರಾವಾಹಿ ಖ್ಯಾತಿಯ ವಚನಾ ಅಲಿಯಾಸ್ ಅಮೃತಾಗೂ ಕಂಕಣ ಬಲ ಕೂಡಿ ಬಂದಿದೆ. ಕಿರುತೆರೆ ನಟ ರಘು ಜೊತೆ ಅಮೃತಾ ಮದುವೆ ನಿಶ್ಚಯ ಆಗಿದೆ. 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದ ರಘು ಮತ್ತು ಅಮೃತಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ನೀಡಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಕೂಡ ನೆರವೇರಿದೆ. ಮೇ 12 ಮತ್ತು 13 ರಂದು ರಘು ಮತ್ತು ಅಮೃತಾ ವಿವಾಹ ಮಹೋತ್ಸವ ನಡೆಯಲಿದೆ.

  ಕಿರುತೆರೆ ನಟಿ 'ಕುಲವಧು' ವಚನಾಗೆ ಕಂಕಣ ಬಲ ಕೂಡಿ ಬಂದಿದೆ.! ಕಿರುತೆರೆ ನಟಿ 'ಕುಲವಧು' ವಚನಾಗೆ ಕಂಕಣ ಬಲ ಕೂಡಿ ಬಂದಿದೆ.!

  ಅನನ್ಯ ಕಾಸರವಳ್ಳಿ ಕಲ್ಯಾಣ

  ಅನನ್ಯ ಕಾಸರವಳ್ಳಿ ಕಲ್ಯಾಣ

  ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಗಳು ಅನನ್ಯ ಕಾಸರವಳ್ಳಿ ಅವರ ಮದುವೆ ಇದೇ ಫೆಬ್ರವರಿ 22ರಂದು ನಡೆಯಲಿದೆ. ಎಂ.ಎಸ್.ಸಂತೋಷ್ ಅವರೊಂದಿಗೆ ಅನನ್ಯ ಕಾಸರವಳ್ಳಿ ಮದುವೆಗೆ ಮುಹೂರ್ತ ನಿಗದಿಯಾಗಿದೆ.

  ಕಿರಣ್-ಹಿತಾ ಚಂದ್ರಶೇಖರ್ ಕಲ್ಯಾಣ

  ಕಿರಣ್-ಹಿತಾ ಚಂದ್ರಶೇಖರ್ ಕಲ್ಯಾಣ

  ಸಿಹಿ ಕಹಿ ಚಂದ್ರು-ಸಿಹಿ ಕಹಿ ಗೀತಾ ಪುತ್ರಿ... ಕನ್ನಡ ಚಿತ್ರ ನಟಿ ಹಿತಾ ಚಂದ್ರಶೇಖರ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ನಟ ಕಿರಣ್ ಶ್ರೀನಿವಾಸ್ ರನ್ನ ಹಿತಾ ಚಂದ್ರಶೇಖರ್ ಲವ್ ಮಾಡುತ್ತಿದ್ದಾರಂತೆ. ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಲವ್ ಮಾಡುತ್ತಿರುವ ವಿಚಾರವನ್ನು ಜಗಜ್ಜಾಹೀರು ಮಾಡಿದ್ದು ನಟಿ ಸೋನು ಗೌಡ. ಸೋಷಿಯಲ್ ಮೀಡಿಯಾದಲ್ಲಿ 'ಒಂಥರಾ ಬಣ್ಣಗಳು' ಜೋಡಿ ಲವ್ ಮಾಡುತ್ತಿದ್ದಾರೆ ಅಂತ ಸೋನು ಗೌಡ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಮದ್ವೆ ಬಗ್ಗೆ ಸ್ಪಷ್ಟನೆ ಇಲ್ಲ.

  ಪ್ರೀತಿ ಮಾಡ್ತಿದ್ದಾರಂತೆ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಪ್ರೀತಿ ಮಾಡ್ತಿದ್ದಾರಂತೆ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್

  English summary
  Neha patil, hitha chandrashekhar, agnisakshi vijay surya, kulavadhu amrutha and ananya kasaravalli marriage date fixed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X